ಗೃಹ ರಕ್ಷಕ ದಳ ಘಟಕಾಧಿಕಾರಿ ಜಗದೀಶ್‌ಗೆ ಮುಖ್ಯಮಂತ್ರಿಯವರ ಚಿನ್ನದ ಪದಕ
ಗೃಹ ರಕ್ಷಕ ದಳ ಭದ್ರಾವತಿ ತಾಲೂಕು ಘಟಕದಲ್ಲಿ ಸುಮಾರು ೨೬ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಘಟಕಾಧಿಕಾರಿಯಾಗಿರುವ ಪ್ಲಟೂನ್ ಕಮಾಂಡರ್ ಜಗದೀಶ್ ಅವರಿಗೆ ಈ ಬಾರಿ ಮುಖ್ಯಮಂತ್ರಿಯವರ ಚಿನ್ನದ ಪದಕ ಲಭಿಸಿದೆ.
ಭದ್ರಾವತಿ : ಗೃಹ ರಕ್ಷಕ ದಳ ತಾಲೂಕು ಘಟಕದಲ್ಲಿ ಸುಮಾರು ೨೬ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಘಟಕಾಧಿಕಾರಿಯಾಗಿರುವ ಪ್ಲಟೂನ್ ಕಮಾಂಡರ್ ಜಗದೀಶ್ ಅವರಿಗೆ ಈ ಬಾರಿ ಮುಖ್ಯಮಂತ್ರಿಯವರ ಚಿನ್ನದ ಪದಕ ಲಭಿಸಿದೆ.
ಜಗದೀಶ್‌ರವರು ಗೃಹ ರಕ್ಷಕ ದಳದಲ್ಲಿ ಅತ್ಯತ್ತಮವಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ ನೀಡಲಾಗಿದೆ. ಈ ಸಂಬಂಧ ಫೆ.೨೪ರಂದು ಆರಕ್ಷಕ ಮಹಾನಿರ್ದೇಶಕರು, ಗೃಹ ರಕ್ಷಕ ದಳ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು, ಪೌರರಕ್ಷಣೆ ಆದೇಶ ಹೊರಡಿಸಿದ್ದು, ಪ್ರಶಸ್ತಿಯು ಪದಕ ಹಾಗು ೫ ಸಾವಿರ ರು. ನಗದು ಒಳಗೊಂಡಿದೆ.
ಜಿಲ್ಲಾ ಸಮಾದೇಷ್ಟ ಡಾ. ಚೇತನ್ ಕುಮಾರ್, ಜಿಲ್ಲಾ ಉಪ ಸಮಾದೇಷ್ಟ ಹಾಲಪ್ಪ ಷಾ ಡಾವಣಗೇರಿ, ಕಛೇರಿ ಅಧಿಕಾರಿ ಹರೀಶ್ ಪಾಟೀಲ್ ಹಾಗು ಜಿಲ್ಲಾ ಕಚೇರಿಯ ಸಿಬ್ಬಂದಿ ವರ್ಗದವರು, ಜಿಲ್ಲೆಯ ಎಲ್ಲಾ ಎನ್‌ಸಿಓ ಅಧಿಕಾರಿಯವರು, ಮಹಿಳಾ ಸದಸ್ಯರನ್ನೊಳಗೊಂಡಂತೆ ಎಲ್ಲಾ ಸದಸ್ಯರು ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದುಕೊಂಡಿರುವ ಜಗದೀರ್ಶ ಅವರನ್ನು ಅಭಿನಂದಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಈ ಬಾರಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಗದೀಶ್‌ರವರನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಿದ್ದರು. ಈ ಹಿನ್ನಲೆಯಲ್ಲಿ ಜಗದೀಶ್‌ರವರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.