ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಕೂಡ್ಲಿಗೆರೆಯಲ್ಲಿ ವಿಶಿಷ್ಟ ಸೇವಾ ಕಾರ್ಯ

ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆ ಬಳಿದು ವಾಹನ ಸವಾರರಿಗೆ ಎಚ್ಚರಿಕೆ 

ಭದ್ರಾವತಿ ತಾಲೂಕಿನ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆ ಬಳಿದು ವಾಹನ ಸವಾರರಿಗೆ ಎಚ್ಚರಿಕೆ ನೀಡುವ ವಿಭಿನ್ನ ರೀತಿಯ ಸೇವಾ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆಯಲಾಯಿತು. 
    ಭದ್ರಾವತಿ :  ತಾಲೂಕಿನ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ವಿಭಿನ್ನ ರೀತಿಯ ಸೇವಾ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆಯಲಾಯಿತು. 
    ಸಿ.ಎನ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ವೇಗ ನಿಯಂತ್ರಕ(ರೋಡ್ ಹಂಪ್ಸ್) ಹಾಕಲಾಗಿದ್ದು, ಇದರಿಂದ ಪ್ರತಿದಿನ ಹಲವಾರು ಸವಾರರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬೀಳುವುದು ಸಾಮಾನ್ಯವಾಗಿತ್ತು. ಇದನ್ನು ಮನಗಂಡ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ವಾಹನ ಸವಾರರನ್ನು ಎಚ್ಚರಿಸಲು ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆಗಳನ್ನು ಬಳಿಯಲಾಗಿದೆ.  ವಾಹನ ಸವಾರರು ಇದರಿಂದ ನಿಧನವಾಗಿ ಸಂಚರಿಸಲು ಸಾಧ್ಯವಾಗಲಿದೆ. 
    ಈ ವಿಶಿಷ್ಟ ಸೇವಾ ಕಾರ್ಯದಲ್ಲಿ ಕ್ಲಬ್ ಅಧ್ಯಕ್ಷ ಆರ್.ಎನ್ ರುದ್ರೇಶ್, ಕಾರ್ಯದರ್ಶಿ ಎಂ.ಬಿ ಮೋಹನ್ ಕುಮಾರ್, ಸದಸ್ಯರಾದ ಪಿ.ಸಿ ಮಲ್ಲಿಕಾರ್ಜುನ, ಭವಾನಿ ಶಂಕರ್, ಎನ. ಕುಮಾರಸ್ವಾಮಿ, ಎಸ್. ಪ್ರಶಾಂತ್, ಎಚ್. ಮೋಹನ್ ಕುಮಾರ್,  ಭರತ್ ಜಾಧವ್, ಗ್ರಾಮಸ್ಥರಾದ ಪಿ.ಸಿ ಮಂಜುನಾಥ್, ಉದಯ್, ಓಂಕಾರಪ್ಪ, ಕಿರಣ್, ಶರತ್, ಅಕ್ಷಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.