ಮಾ.೩ರಿಂದ ೪೧ನೇ ವರ್ಷದ ಶ್ರೀ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವ
ಭದ್ರಾವತಿ: ನಗರಸಭೆ ವ್ಯಾಪ್ತಿಯ ಉಜ್ಜನೀಪುರ ಶ್ರೀ ಮದ್ದೂರಮ್ಮ ಟ್ರಸ್ಟ್ ವತಿಯಿಂದ ಮಾ.೩ ಮತ್ತು ೪ರಂದು ೪೧ನೇ ವರ್ಷದ ಶ್ರೀ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.
ಫೆ.೩ರ ಮಂಗಳವಾರ ಸಂಜೆ ೫ ಗಂಟೆಗೆ ಗಂಗೆಪೂಜೆ ಮತ್ತು ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ, ೮.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ೪ರಂದು ಮಧ್ಯಾಹ್ನ ೧೨.೩೦ಕ್ಕೆ ಆರತಿ ತರುವ ಕಾರ್ಯಕ್ರಮ ನಡೆಯಲಿದೆ. ೨ ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.