ಮಹಿಳೆಯರು ಸಹ ಹೆಚ್ಚು ಸಂಘಟಿತರಾದಾಗ ಹೆಚ್ಚಿನ ಬಲಗೊಳ್ಳಲು ಸಾಧ್ಯ.: ಸ್ಟೀವನ್ ಡೆಸಾ
ಭದ್ರಾವತಿ ನ್ಯೂಟೌನ್ ಅಮಲೋಧ್ಬವಿ ಮಾತೆ ದೇವಾಲಯದ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಮಹಿಳಾ ಘಟಕ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ: ಮಹಿಳೆಯರು ಸಹ ಹೆಚ್ಚು ಸಂಘಟಿತರಾದಾಗ ಹೆಚ್ಚಿನ ಬಲಗೊಳ್ಳಲು ಸಾಧ್ಯ. ಆ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಗಾಂಧಿನಗರ ವೇಳಾಂಗಣಿ ಆರೋಗ್ಯಮಾತೆ ದೇವಾಲಯದ ಧರ್ಮಗುರು ಸ್ಟೀವನ್ ಡೆಸಾ ಹೇಳಿದರು.
ಅವರು ನ್ಯೂಟೌನ್ ಅಮಲೋಧ್ಬವಿ ಮಾತೆ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತಷ್ಟು ಸಬಲೀಕರಣಗೊಳ್ಳಬೇಕಿದೆ. ಸಮಾಜದಲ್ಲಿ ತಮ್ಮ ಮೇಲಿನ ಶೋಷಣೆ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಅಶಕ್ತರು, ದೀನದಲಿತರು, ಸಂಕಷ್ಟಕ್ಕೆ ಒಳಗಾದವರ ಸೇವೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.
ಕಾಗದನಗರದ ಕಾರ್ಮಿಕರ ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಕ್ರಿಸ್ತರಾಜ್, ಸೈಂಟ್ ಚಾರ್ಲ್ಸ್ ವಿದ್ಯಾಸಂಸ್ಥೆ ಸುಪೀರಿಯರ್ ಎಲಿಜಬೆತ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ನೂತನ ಮಹಿಳಾ ಘಟಕದ ಗೌರವಾಧ್ಯಕ್ಷೆ ಎಲ್ಸಿ ಡಿಸೋಜಾ, ಅಧ್ಯಕ್ಷೆ ಜೆಸ್ಸಿ ಬೆನೆಟ್ ಗೋನ್ಸಾಲ್ವಿಸ್, ಉಪಾಧ್ಯಕ್ಷೆ ಎಸ್ತರ್, ಕಾರ್ಯದರ್ಶಿ ನಿರ್ಮಲಾ ಪೀಟರ್, ಸಹ ಕಾರ್ಯದರ್ಶಿ ಕ್ಲೇರಿಟ್ ಡಿಸೋಜಾ, ಖಜಾಂಚಿ ಮೋಕ್ಷ ರಾಣಿ, ಸೀಮಾ ಪ್ರವೀಣ್, ಸಂದ್ಯಾ ಕ್ರಿಸ್ತರಾಜ್, ಪರಿಮಳ, ವಿನ್ನಿ ಡಿಸೋಜ, ಐರಿನ್ ಪೀಟರ್, ಪ್ರಮೀಳಾ ಮೇರಿ, ಕ್ಲಿಯೋನ್ ಡಿಕೊಸ್ಟ, ಫಿಲೋಮಿನ ದಾಸ್, ಸೆನ್ನಿನ್ ರೋಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
