ಶಾಲಾ ಮಕ್ಕಳಿಗೆ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ

ಭದ್ರಾವತಿಯಲ್ಲಿ ಅಪ್ಪರ್ ಹುತ್ತಾ  ಗೆಳೆಯರ ಬಳಗ ಟ್ರಸ್ಟ್ ವತಿಯಿಂದ  ಶಿವಮೊಗ್ಗ  ಶಂಕರ ಕಣ್ಣಿನ ಆಸ್ಪತ್ರೆ  ಸಹಯೋಗದೊಂದಿಗೆ ಶುಕ್ರವಾರ ನ್ಯೂಟೌನ್  ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಚಾಲನೆ ನೀಡಿದರು. 
    ಭದ್ರಾವತಿ : ಅಪ್ಪರ್ ಹುತ್ತಾ  ಗೆಳೆಯರ ಬಳಗ ಟ್ರಸ್ಟ್ ವತಿಯಿಂದ  ಶಿವಮೊಗ್ಗ  ಶಂಕರ ಕಣ್ಣಿನ ಆಸ್ಪತ್ರೆ  ಸಹಯೋಗದೊಂದಿಗೆ ಶುಕ್ರವಾರ ನ್ಯೂಟೌನ್  ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ವಿಶೇಷವಾಗಿ ಶಾಲಾ ಮಕ್ಕಳ ಕಣ್ಣಿನ ಆರೋಗ್ಯ ಕುರಿತು ಹೆಚ್ಚಿನ ಕಾಳಜಿವಹಿಸಿ ಅತ್ಯಾಧುನಿಕ ಉಪಕರಣಗಳ ಬಳಕೆ ಮೂಲಕ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಭವಿಷ್ಯದಲ್ಲಿ ಮಕ್ಕಳಿಗೆ ಎದುರಾಗಬಹುದಾದ ಸಮಸ್ಯೆಗಳಿಂದ ಮುಕ್ತಿ ನೀಡುವುದು ಈ ಶಿಬಿರದ ಉದ್ದೇಶವಾಗಿದೆ. 
    ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಶಿಬಿರಕ್ಕೆ ಚಾಲನೆ ನೀಡಿದರು. ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಕಾರ್ಯದರ್ಶಿ ಚರಣ್ ರಾಜ್, ಸಂಸ್ಥಾಪಕ ಕುಮಾರಣ್ಣ, ನಗರಸಭೆ ಸದಸ್ಯರಾದ  ಕಾಂತರಾಜ್, ಕೆ. ಸುದೀಪ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ  ಎಂ.ಎಸ್ ಸುಧಾಮಣಿ, ಕರೀಗೌಡ, ಮಹದೇವ ,ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 
    ಬೃಹತ್ ಶಿಬಿರದಲ್ಲಿ ತಾಲೂಕಿನ ಎಲ್ಲಾ ಸರಕಾರಿ ಹಾಗು ಅನುದಾನಿತ ಶಾಲೆಗಳ ಸುಮಾರು ೩೦೦೦ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ  ಗುರಿಯನ್ನು ಗೆಳೆಯರ ಬಳಗ ಹೊಂದಿದೆ.