ಎತ್ತಿನ ಗಾಡಿಯಿಂದ ಕೆಳಗೆ ಬಿದ್ದು ಕೂಲಿ ಕಾರ್ಮಿಕ ಸಾವು
ಭದ್ರಾವತಿ: ಅಡಕೆ ಮರ ಕಡಿದುಕೊಂಡು ಎತ್ತಿನ ಗಾಡಿಯಲ್ಲಿ ಕೊಂಡೊಯ್ಯುವಾಗ ಕೂಲಿಕಾರ್ಮಿಕರೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಜೇಡಿಕಟ್ಟೆ ಹೊಸೂರಿನಿಂದ ಶರವಣ(೫೩) ಎಂಬ ಕೂಲಿಕಾರ್ಮಿಕ ೨೦ ಅಡಿ ಉದ್ದದ ಅಡಕೆ ಮರ ಕಡಿದು ಎತ್ತಿನಗಾಡಿಯಲ್ಲಿ ಕೊಂಡೊಯ್ಯುವಾಗ ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಬಳಿ ಎತ್ತಿನಗಾಡಿಯಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ
ಇವರ ಮೃತದೇಹದ ಮರಣೋತ್ತರ ಪರೀಕ್ಷೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ವರದಿ ಬಂದ ನಂತರ ಇವರ ಸಾವಿನ ಕುರಿತು ಖಚಿತ ಮಾಹಿತಿ ಲಭ್ಯವಾಗಲಿದೆ. ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.