ಮಾ.೨೭ರಂದು ವಿಶ್ವ ರಂಗಭೂಮಿ ದಿನಾಚರಣೆ : ಹಿರಿಯ ರಂಗ ಕಲಾವಿದ ಡಿ. ರುದ್ರಯ್ಯರಿಗೆ ಆಹ್ವಾನ

ಭದ್ರಾವತಿಯಲ್ಲಿ ಕಲಾವಿದರು ತಂಡದಿಂದ ಮಾ.೨೭ರ ಶುಕ್ರವಾರ ಆಯೋಜಿಸಲಾಗಿರುವ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲು ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರ, ವಿಕಸಂ ಹಿರಿಯ ರಂಗಭೂಮಿ ಕಲಾವಿದರಾದ ಡಿ. ರುದ್ರಯ್ಯ ಅವರನ್ನು ಆಹ್ವಾನಿಸಲಾಯಿತು. ಹಿರಿಯ ರಂಗಭೂಮಿ ಕಲಾವಿದರಾದ ಕೆ.ಎಸ್ ರವಿಕುಮಾರ್, ಕಮಲಕರ್, ಬಿ. ಚಿದಾನಂದ ಮತ್ತು ತಮಟೆ ಜಗದೀಶ್ ಉಪಸ್ಥಿತರಿದ್ದರು. 
    ಭದ್ರಾವತಿ : ನಗರದಲ್ಲಿ ಸುಸ್ಸಜ್ಜಿತ ರಂಗಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಲು ಎಲ್ಲಾ ಪ್ರಕಾರದ ಕಲಾವಿದರನ್ನು ಒಗ್ಗೂಡಿಸಿ ಕಳೆದ ಕೆಲವು ತಿಂಗಳುಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ರಂಗ ಕಲಾವಿದರು ತಂಡ ಈ ಬಾರಿ ವಿಶೇಷವಾಗಿ ಮಾ.೨೭ರ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ. 
    ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಕಾಗದನಗರದ ವಿಕಸಂ, ಲಲಿತ ಕಲಾ ಸಂಘ, ಶಾಂತಲಾ ಕಲಾ ವೇದಿಕೆ, ಮಿತ್ರ ಕಲಾ ಮಂಡಳಿ ಮತ್ತು ಅಪರಂಜಿ ಅಭಿನಯ ಶಾಲೆ ಹಾಗು ನವೋದಯ ಕಲಾ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರ, ವಿಕಸಂ ಹಿರಿಯ ರಂಗಭೂಮಿ ಕಲಾವಿದರಾದ ಡಿ. ರುದ್ರಯ್ಯ ಉದ್ಘಾಟಿಸಲಿದ್ದಾರೆ. 
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರಂಗ ಕಲಾವಿದರು ತಂಡದ ಉಪಾಧ್ಯಕ್ಷ ಜಿ. ದಿವಾಕರ ಅಧ್ಯಕ್ಷತೆವಹಿಸಲಿದ್ದಾರೆ.  
    ಮಿತ್ರ ಕಲಾ ಮಂಡಳಿ ತಂಡದಿಂದ ರಂಗ ಗೀತೆ ಗಾಯನ, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರು ನಾಟಕ ಏರ್ಪಡಿಸಲಾಗಿದೆ. ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.