ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ

ಭದ್ರಾವತಿ ಸಿದ್ದಾರೂಢ ನಗರದ ತಾಲೂಕು ಅಧಿಕಾರಿಗಳ ಸಂಘದ ವತಿಯಿಂದ ಸಾಮಾಜಿಕ ಸೇವಾ ಮನೋ ಸಂಕಲ್ಪದೊಂದಿಗೆ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. 
    ಭದ್ರಾವತಿ : ಸಿದ್ದಾರೂಢ ನಗರದ ತಾಲೂಕು ಅಧಿಕಾರಿಗಳ ಸಂಘದ ವತಿಯಿಂದ ಸಾಮಾಜಿಕ ಸೇವಾ ಮನೋ ಸಂಕಲ್ಪದೊಂದಿಗೆ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. 
    ಅಧಿಕಾರಿಗಳ ಸಂಘ ಹಲವಾರು ವರ್ಷಗಳಿಂದ ವಿವಿಧ ಸೇವಾ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದು, ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘದ ಕಾರ್ಯದರ್ಶಿ ವಿ. ಪ್ರಕಾಶ್‌ರವರು ತಮ್ಮ ಸ್ವಂತ ಹಣದಲ್ಲಿ ಮೂರು ಚಕ್ರದ ಸೈಕಲ್, ವಾಟರ್ ಬೆಡ್,  ಇಸ್ತ್ರಿ ಮಾಡುವ ಟೇಬಲ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಸಂಘದ ಮೂಲಕ ಕೊಡುಗೆಯಾಗಿ ನೀಡಿದ್ದಾರೆ.
    ಸಂಘದ ಅಧ್ಯಕ್ಷ, ನಗರಸಭೆ ಪೌರಾಯುಕ್ತ ಕೆ.ಎನ್  ಹೇಮಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಂಘದ ಉಪಾಧ್ಯಕ್ಷ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣ ಗೌಡ, ಸಂಘದ ಸಂಸ್ಥಾಪಕ ಸದಸ್ಯ ಎನ್.ಟಿ.ಸಿ ನಾಗೇಶ್, ಖಜಾಂಚಿ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪಿಡಿಒ ಕೇಶವಮೂರ್ತಿ ವಂದಿಸಿದರು.