ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರಿಂದ ಗುರು ನಿವಾಸ ಉದ್ಘಾಟನೆ

ಭದ್ರಾವತಿ ಭದ್ರಾನದಿ ತೀರದ ನಗರದ ಶ್ರೀ ಶೃಂಗೇರಿ ಶಂಕರ ಮಠದ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುನಿವಾಸವನ್ನು ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು ಬುಧವಾರ ಉದ್ಘಾಟಿಸಿದರು. 
    ಭದ್ರಾವತಿ : ಭದ್ರಾನದಿ ತೀರದ ನಗರದ ಶ್ರೀ ಶೃಂಗೇರಿ ಶಂಕರ ಮಠದ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುನಿವಾಸವನ್ನು ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು ಬುಧವಾರ ಉದ್ಘಾಟಿಸಿದರು. 
    ಈ ಸಂಬಂಧ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗುರುಗಣೇಶ ಪೂಜೆ, ಪುಣ್ಯಾಹವಾಚನ, ಶ್ರೀ ಮಹಾಗಣಪತಿ ಹೋಮ,  ಶ್ರೀ ಜಗದ್ಗುರುಗಳ ಉಪಸ್ಥಿತಿಯಲ್ಲಿ ಪೂರ್ಣಾಹುತಿ, ಶ್ರೀ ಗುರುನಿವಾಸದ ಉದ್ಘಾಟನೆ ನಂತರ ಸನ್ನಿಧಿಯಲ್ಲಿ ಧೂಳಿಪಾದಪೂಜೆ, ಭಿಕ್ಷಾವಂದನೆ, ಗುರುಪಾದುಕಾಪೂಜೆ, ವಿವಿಧ ಸಂಘ ಸಂಸ್ಥೆಗಳಿಂದ ಫಲ ಸಮರ್ಪಣೆ ನಂತರ ಶ್ರೀ ಜಗದ್ಗುರುಗಳವರಿಂದ ಫಲ-ಮಂತ್ರಾಕ್ಷತೆ, ರಜತ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಪ್ರಾರಂಭದಿಂದಲೂ ಹಾಗೂ ಈಗಲೂ ಸೇವೆ ಸಲ್ಲಿಸುತ್ತಿರುವವರಿಗೆ ಗೌರವ ಸಮರ್ಪಣೆ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. 


  ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಪ್ರಮುಖರಾದ ಕೆ.ಎಸ್ ನಾಗರಾಜ್, ಶಾಂತಕುಮಾರ್, ಕೆ.ಆರ್ ನಾಗರಾಜ್, ಎ.ಎನ್ ಸುರೇಶ್, ಕೆ.ಎನ್ ಶ್ರೀಹರ್ಷ, ಜಿ. ರಮೇಶ್, ವಿವಿಧ ದೇವಸ್ಥಾನಗಳ ಅರ್ಚಕರು, ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸೇರಿದಂತೆ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.