ಮಿತ್ರ ಕಲಾಮಂಡಳಿಯಿಂದ `ವಿಶ್ವ ರಂಗಭೂಮಿ ದಿನ' : ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ

ಭದ್ರಾವತಿ ನಗರದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ 'ಮಿತ್ರ ಕಲಾಮಂಡಳಿ' ವತಿಯಿಂದ ಕಲೆ ಮತ್ತು ಕಲಾವಿದರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಆಶಯದೊಂದಿಗೆ ಈ ಬಾರಿ ವಿಶ್ವ ರಂಗಭೂಮಿ ದಿನ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. 
    ಭದ್ರಾವತಿ : ನಗರದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ 'ಮಿತ್ರ ಕಲಾಮಂಡಳಿ' ವತಿಯಿಂದ ಕಲೆ ಮತ್ತು ಕಲಾವಿದರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಆಶಯದೊಂದಿಗೆ ಈ ಬಾರಿ ವಿಶ್ವ ರಂಗಭೂಮಿ ದಿನ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. 
    ಕಾರ್ಯಕ್ರಮದ ಅಧ್ಯಕ್ಷತೆ ಬಸವರಾಜ್ ವಹಿಸಿದ್ದರು. ಉಪಾಧ್ಯಕ್ಷರಾದ ಪರಮೇಶ್ವರಪ್ಪ, ಫ್ರಾನ್ಸಿಸ್, ಪ್ರಸನ್ನ ಕುಮಾರ್ ಹಾಗೂ ಸರೋಜಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಈ ವರ್ಷ ಕಲಾಮಂಡಳಿಗೆ ಸೇರ್ಪಡೆಯಾದ ಹೊಸ ಪ್ರತಿಭೆಗಳನ್ನು ಅಧಿಕೃತವಾಗಿ ಬರಮಾಡಿಕೊಳ್ಳಲಾಯಿತು. ಹಿರಿಯ ಕಲಾವಿದರು ಹೊಸ ಪ್ರತಿಭೆಗಳಿಗೆ ರಂಗಭೂಮಿಯ ಶಿಸ್ತು ಮತ್ತು ಕಲೆಯ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ "ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರತಿಬಿಂಬ" ಎಂದರು.
      ಸ್ಥಳೀಯ ರಂಗಕರ್ಮಿಗಳು ಹಾಗು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಂಬ ಆಶಯ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಗಾಯಕರಾದ ಡಿ.ಆರ್ ಹರೀಶ್ ಮತ್ತು ಜಿ. ದಿವಾಕರ್ ಅವರು ಪ್ರಸ್ತುತಪಡಿಸಿದ ರಂಗಗೀತೆಗಳು ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದವು. 
    ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರು ಪ್ರದರ್ಶಿಸಿದ `ಏಕಪಾತ್ರಭಿನಯ' ವಿಶೇಷ ಆಕರ್ಷಣೆಯಾಗಿತ್ತು.