ನಗರಸಭೆ ೫ ಮಂದಿ ನಾಮನಿರ್ದೇಶಿತ ಸದಸ್ಯರಿಂದ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆಗೆ ಸರ್ಕಾರದಿಂದ ನೂತನವಾಗಿ ನೇಮಕಗೊಂಡಿರುವ ೫ ಜನ ನಾಮನಿರ್ದೇಶಿತ ಸದಸ್ಯರು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ: ನಗರಸಭೆಗೆ ಸರ್ಕಾರದಿಂದ ನೂತನವಾಗಿ ನೇಮಕಗೊಂಡಿರುವ ೫ ಜನ ನಾಮನಿರ್ದೇಶಿತ ಸದಸ್ಯರು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. 
    ಹಳೇನಗರ, ಗೌಳಿಗರ ಬೀದಿ ಶ್ರೀ ಚೌಡಮ್ಮ ದೇವಸ್ಥಾನ ಹತ್ತಿರದ ನಿವಾಸಿ ಮಂಜುನಾಥ್, ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಂ.ಜಿ ರಾಮಚಂದ್ರ, ಬಿಳಿಕಿ ಜೇಡಿಕಟ್ಟೆ ನಿವಾಸಿ ಎಸ್. ವಾಗೀಶ್, ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಸಮೀಪದ ನಿವಾಸಿ ಸೈಯದ್ ಅಬ್ದುಲ್ ರೆಹಮಾನ್(ದಿಲ್‌ದಾರ್) ಹಾಗು ಹುಡ್ಕೋ ಕಾಲೋನಿ ನಿವಾಸಿ ಎ. ವಿಲ್ಸನ್ ಬಾಬು ನೂತನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. 
    ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಮುಖಂಡರು ನೂತನ ನಾಮನಿರ್ದೇಶಿತ ಸದಸ್ಯರನ್ನು ಅಭಿನಂದಿಸಿದ್ದಾರೆ.