ಮಾ.೨೧ರಂದು ಬಂಜೆತನ ಉಚಿತ ಶಿಬಿರ


    ಭದ್ರಾವತಿ : ನಗರದ ಉಂಬ್ಳೇಬೈಲ್ ರಸ್ತೆಯಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಾ. ೨೧ರಂದು ಶನಿವಾರ ಬೆಳಗ್ಗೆ ೧೦ ರಿಂದ ಮದ್ಯಾಹ್ನ ೩ ಗಂಟೆವರೆಗೆ ಬೆಂಗಳೂರಿನ ಮಿಲನ್ ಫರ್ಟಿಲಿಟಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ಬಂಜೆತನ ಶಿಬಿರ ಮತ್ತು ತಜ್ಞ ವೈದ್ಯೆ ಡಾ: ಕಾವ್ಯ ಡಿ.ಶರ್ಮಾ ಅವರಿಂದ ಉಚಿತ ಸಮಾಲೋಚನೆ ನಡೆಯಲಿದೆ.
    ಅತ್ಯಂತ ವಿಶ್ವಾಸಾರ್ಹ ಬಂಜೆತನ ನಿವಾರಣಾ ಮಿಲನ್ ಫರ್ಟಿಲಿಟಿ ಸ್ಪೆಷಲಿಸ್ಟ್ ಸಂಸ್ಥೆಯಲ್ಲಿ ಫರ್ಟಿಲಿಟಿ ಮತ್ತು ಐವಿಎಫ್, ಪುರುಷರ ಆರೋಗ್ಯ, ಸ್ತ್ರೀರೋಗ ಶಾಸ್ತ್ರ, ಸರೊಗಸಿ ಇತರ ಸೌಲಭ್ಯ ಲಭ್ಯವಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಿಲನ್ ಸಂಸ್ಥೆಯ ಪ್ರಾಡಕ್ಟ್ ಸ್ಪೆಷಲಿಸ್ಟ್ (ಹೆಚ್.ಸಿ.ಎಲ್) ಬಿ.ಆರ್ ವೆಂಕಟೇಶ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: ೯೬೨೦೨ ೧೩೦೪೬ ಸಂಪರ್ಕಿಸಬಹುದಾಗಿದೆ.