ಸರ್ಕಾರಿ ಶಾಲೆ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಿಸಿ ಹುಟ್ಟುಹಬ್ಬ ಆಚರಣೆ
ಭದ್ರಾವತಿ ನಗರದ ನ್ಯೂಟೌನ್ ನಿವಾಸಿ, ಸಮಾಜ ಸೇವಕ ಬಿ. ಜಗದೀಶ್-ಪುಷ್ಪ ದಂಪತಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪರೀಕ್ಷೆಗೆ ಅಗತ್ಯವಿರುವ ಲೇಖನ ಸಾಮಾಗ್ರಿ ವಿತರಿಸಲಾಯಿತು.
ಭದ್ರಾವತಿ : ನಗರದ ನ್ಯೂಟೌನ್ ನಿವಾಸಿ, ಸಮಾಜ ಸೇವಕ ಬಿ. ಜಗದೀಶ್-ಪುಷ್ಪ ದಂಪತಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪರೀಕ್ಷೆಗೆ ಅಗತ್ಯವಿರುವ ಲೇಖನ ಸಾಮಾಗ್ರಿ ವಿತರಿಸಲಾಯಿತು.
ಪುಷ್ಪ ತಮ್ಮ ೪೪ನೇ ವರ್ಷದ ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಕಾರ್ಡ್ ಬೋರ್ಡ್, ಜಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಿ ಸಿಹಿ ಹಂಚಿಕೆ ಮಾಡಿದರು. ಶಾಲಾಭಿವೃದ್ಧಿ ಪ್ರಮುಖರಾದ ಯೇಸು ಮಾತನಾಡಿ, ಹುಟ್ಟುಹಬ್ಬ ಅದ್ದೂರಿ ಎಲ್ಲಾದರೂ ಆಚರಿಸಿಕೊಳ್ಳಬಹುದಾಗಿದೆ. ಆದರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಸಂಭ್ರಮ ಹಂಚಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ದಲಿತ ಮುಖಂಡರಾದ ದಾಸ್, ರವಿಕುಮಾರ್, ಯತೀಶ್, ಬಾಬು, ರಾಘಣ್ಣ, ಪ್ರಭು, ಮಣಿ, ಮಹಂತೇಶ, ವೇಲು, ಪ್ರಶಾಂತ್, ಅಭಿ, ಶ್ಯಾಮ್, ಹೇಮಂತ್, ಶಾಲೆಯ ಮುಖ್ಯ ಶಿಕ್ಷಕಿ ಹಾಗು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು, ಟೈಮ್ಸ್ ಸ್ಪೂರ್ತಿ ಇಂಟರ್‌ನ್ಯಾಷನಲ್ ಸ್ಕೂಲ್ ವಾಹನ ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.jpeg)