ಮೇ.೨೫ರಂದು ಉಚಿತ ಸಾಮೂಹಿಕ ವಿವಾಹ ಮಹೋತ್ಸವ

    ಭದ್ರಾವತಿ : ನಗರದ ವಿಶ್ವ ಹಿಂದೂ ಪರಿಷದ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ಮತ್ತು ಧರ್ಮಶ್ರೀ ಸಭಾ ಭವನ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೪೨ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮೇ. ೨೫ರ ಭಾನುವಾರ ಹಮ್ಮಿಕೊಳ್ಳಲಾಗಿದೆ. 
    ಸಿದ್ದಾರೂಢ ನಗರದ ಕಾಳಿದಾಸ ಬಡಾವಣೆ, ಧರ್ಮಶ್ರೀ ಸಭಾಭವನದಲ್ಲಿ ಅಂದು ಮಧ್ಯಾಹ್ನ ೧೨ ರಿಂದ ೧ ಗಂಟೆವರೆಗಿನ ಶುಭ ಮುಹೂರ್ತದಲ್ಲಿ ಮಹೋತ್ಸವ ಜರುಗಲಿದೆ. ಇದುವರೆಗೂ ೭೭೬ ಜೊತೆ ವಿವಾಹಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಸಾರ್ವಜನಿಕರು ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 
    ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ತುಂಬಿರಬೇಕು. ಈ ಸಂಬಂಧ ವಯಸ್ಸಿನ ದೃಢೀಕರಣ ಪತ್ರ ಸಲ್ಲಿಸುವುದು ಹಾಗು ಇತ್ತಿಚಿನ ೨ ಭಾವಚಿತ್ರ ಮತ್ತು ಆಧಾರ್ ಗುರುತಿನ ಚೀಟಿ ಕಡ್ಡಾಯವಾಗಿ ಕೋರಿಕೆ ಅರ್ಜಿ ಜೊತೆಯಲ್ಲಿ ಸಲ್ಲಿಸತಕ್ಕದ್ದಾಗಿದೆ. ಮೇ. ೧ರೊಳಗೆ ಕೆ. ನಿರಂಜನ, ವ್ಯವಸ್ಥಾಪಕರು, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ, ಬಿ.ಎಚ್ ರಸ್ತೆ, ಭದ್ರಾವತಿ ಈ ವಿಳಾಸದಲ್ಲಿ ಕೋರಿಕೆ ಅರ್ಜಿ ಸಲ್ಲಿಸಬೇಕು. ೨ ನೇ ಮದುವೆಗೆ ಅವಕಾಶ ಇರುವುದಿಲ್ಲ.  
    ವಿವಾಹ ಮಹೋತ್ಸವದಲ್ಲಿ ಅನೇಕ ಪರಮ ಪೂಜ್ಯರು ಸಾನಿಥ್ಯವಹಿಸುವರು. ಹೆಚ್ಚಿನ ಮಾಹಿತಿಗೆ ಡಿ.ಆರ್ ಶಿವಕುಮಾರ್ ಮೊ : ೯೯೬೪೨೩೭೦೭೮, ಹಾ. ರಾಮಪ್ಪ ಮೊ: ೯೮೮೦೭೭೯೨೯೩ ಸಂಪರ್ಕಿಸಬಹುದಾಗಿದೆ.