ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವ
ಭದ್ರಾವತಿ : ಕ್ಷೇತ್ರಪಾಲಕ, ಪುರಾಣ ಪ್ರಸಿದ್ಧ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶುಕ್ರವಾರ ರಾಮೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ರಾಜಬೀದಿ ಉತ್ಸವ ಮೆರವಣಿಗೆ ಹಳೇನಗರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನಕ್ಕೆ ಬಂದು ತಲುಪಿತು. ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮ ಹಾಗು ಸಹಾಯಕ ಅರ್ಚಕ ಶ್ರೀನಿವಾಸ್ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು.
ಮುಜರಾಯಿ ಅಧಿಕಾರಿ ಪ್ರದೀಪ್ ಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಆಡಳಿತ ಅಧಿಕಾರಿ ಪ್ರಶಾಂತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಅಧ್ಯಕ್ಷ ಜಿ. ರಮಾಕಾಂತ್, ಮಂಜುನಾಥ್, ಬಿ.ಆರ್ ಮಹೇಶ್, ಸತೀಶ ಅಯ್ಯರ್, ನಾಗೇಶ್, ಹಾಲಮ್ಮ, ಪರಶುರಾಮ್, ಶೋಭಾ, ಶಿವಾನಂದ, ರಂಗನಾಥ್ ಉಪಸ್ಥಿತರಿದ್ದರು.
ಡಿ೨೭-ಬಿಡಿವಿಟಿ೧
ಕ್ಷೇತ್ರಪಾಲಕ, ಪುರಾಣ ಪ್ರಸಿದ್ಧ ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶುಕ್ರವಾರ ರಾಮೋತ್ಸವ ವಿಜೃಂಭಣೆಯಿಂದ ಜರುಗಿತು.
Ananthakumara, Reporter, Kannadaprabha,
NDK/31A, Near, Sri Satyasayi Baba school,
Newtown, Bhadravathi:-577301(Tq)
Shimoga(Dis)
Mob: 9738801478
: 9482007466