ಶ್ರೀ ಮದ್ದೂರಮ್ಮ ದೇವಸ್ಥಾನ ಜಾತ್ರಾ ಮಹೋತ್ಸವ : ಗಮನ ಸೆಳೆದ ಗಾಯಕರ ತಂಡ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನೀಪುರದ ಶ್ರೀ ಮದ್ದೂರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್.ಜೆ ಸುಗಮ ಸಂಗೀತ ಕಲಾ ತಂಡದ ಗಾಯಕರು ಭಕ್ತರ ಗಮನ ಸೆಳೆದರು.  
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಉಜ್ಜನೀಪುರದ ಶ್ರೀ ಮದ್ದೂರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್.ಜೆ ಸುಗಮ ಸಂಗೀತ ಕಲಾ ತಂಡದ ಗಾಯಕರು ಭಕ್ತರ ಗಮನ ಸೆಳೆದರು. 
    ಭಕ್ತಿಗೀತೆ, ಭಾವಗೀತೆ, ಜಾನಪದಗೀತೆಗಳ ಸುಮಧುರ ಗಾಯನದ ಮೂಲಕ ಸುಮಾರು ೪ ಗಂಟೆ ಸಮಯ ಭಕ್ತರ ಮನಸ್ಸಿಗೆ ಮುದ ನೀಡುವಲ್ಲಿ ಗಾಯಕರು ಯಶಸ್ವಿಯಾದರು.  ಗಾಯಕ ಡಿ.ಆರ್ ಹರೀಶ್, ಜಾನಪದ ಕಲಾವಿದ ದಿವಾಕರ್, ತಬಲ ಮಾಸ್ಟರ್ ಶಿವರಾಜ್ ಮತ್ತು ರಮೇಶ್ ಅವರನ್ನೊಳಗೊಂಡ ತಂಡ ಭಕ್ತರ ಗಮನ ಸೆಳೆಯಿತು. 
    ಶ್ರೀ ಮದ್ದೂರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಉಜ್ಜಿನಿಪುರ, ಕಾಗದನಗರ, ಹುಡ್ಕೋಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.