ನಾಗರಾಜ ನಿಧನ
ನಾಗರಾಜ
ಭದ್ರಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ರೂಪ ಅವರ ಪತಿ, ಹಳೇ ಸಿದ್ದಾಪುರ ನಿವಾಸಿ ನಾಗರಾಜ(೪೮) ಭಾನುವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹಳೇ ಸಿದ್ದಾಪುರದ ಇವರ ಜಮೀನಿನಲ್ಲಿ ನೆರವೇರಿತು. ನಾಗರಾಜ ಮೂಲತಃ ಕೃಷಿಕರಾಗಿದ್ದು, ಅಲ್ಲದೆ ಡೈರಿ ಗುತ್ತಿಗೆದಾರರಾಗಿದ್ದರು.
ಇವರ ನಿಧನಕ್ಕೆ ಬಿಳಿಕಿ ಹಿರೇಮಠ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಸಿದ್ದಲಿಂಗಯ್ಯ, ವಾಗೀಶ್, ನಗರಸಭೆ ಸದಸ್ಯ ಸೈಯದ್ ರಿಯಾಜ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.