ಭದ್ರಾ ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
ಭದ್ರಾ ನದಿ ಸಂರಕ್ಷಣಾ ಪಡೆಯಿಂದ ನಗರಸಭೆಗೆ ದೂರು
ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಪವಿತ್ರವಾದ ಭದ್ರಾ ನದಿಗೆ ತ್ಯಾಜ್ಯ ಎಸೆಯಲಾಗುತ್ತಿದ್ದು, ಇದು ಜಲಚರಗಳು ಹಾಗು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ನದಿಗೆ ತ್ಯಾಜ್ಯ ಎಸೆಯುವುದು ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಭದ್ರಾ ನದಿ ಸಂರಕ್ಷಣಾ ಪಡೆ ಮುಖಂಡ, ಸಾಮಾಜಿಕ ಹೋರಾಟಗಾರ ಸಿ. ತೀರ್ಥೇಶ್ ಪೌರಾಯುಕ್ತ ಕೆ.ಎನ್ ಹೇಮಂತ್ ಅವರಿಗೆ ಮಂಗಳವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ.

ನಗರದ ಹೊಸ ಸೇತುವೆ ಹಾಗು ಹಳೇ ಸೇತುವೆ ಇಕ್ಕೆಲಗಳಲ್ಲಿ ರಾಶಿ ರಾಶಿ ತ್ಯಾಜ್ಯವಿದ್ದು, ಇದರಿಂದಾಗಿ ಪವಿತ್ರವಾದ ಭದ್ರಾ ನದಿ ಮಾಲಿನ್ಯಗೊಳ್ಳುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪ್ರಕಾರ ನದಿಗೆ ತ್ಯಾಜ್ಯ ಎಸೆಯುವುದು ಅಪರಾಧವಾಗಿದೆ. ತ್ಯಾಜ್ಯ ಎಸೆಯುವವರಿಗೆ ದಂಡದ ಶಿಕ್ಷೆ ವಿಧಿಸಬಹುದಾಗಿದೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಹಾಗು ಸುಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಸಹ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದೆ. ತಕ್ಷಣ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಪತ್ರ ಬರೆಯುವಂತೆ ತೀರ್ಥೇಶ್ ಆಗ್ರಹಿಸಿದ್ದಾರೆ.
ಡಿಎಸ್‌ಎಸ್ ಮುಖಂಡರಾದ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರರಾದ ಜಯಣ್ಣ, ಗಣೇಶ್, ರೈತ ಮುಖಂಡರಾದ ಇಮ್ರಾನ್ ಪಾಷ, ಭದ್ರಾ ನದಿ ಸಂರಕ್ಷಣಾ ಪಡೆ ಮುಖ್ಯಸ್ಥ ಕಾರ್ತಿಕ್ ಕಿದ್ಮಯ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದು, ನದಿಗೆ ನಿರ್ಮಿಸಲಾಗಿರುವ ಹೊಸಸೇತುವೆ ಹಾಗು ಹಳೇ ಸೇತುವೆ ಇಕ್ಕೆಲಗಳಲ್ಲಿ ರಾಶಿ ರಾಶಿ ತ್ಯಾಜ್ಯ ಎಸೆದಿರುವುದು.