ವಿಐಎಸ್‌ಎಲ್ ಇಸ್ಪಾತ್ ಮಹಿಳಾ ಸಮಾಜದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಇಸ್ಪಾತ್ ಮಹಿಳಾ ಸಮಾಜದಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಇಸ್ಪಾತ್ ಮಹಿಳಾ ಸಮಾಜದಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು.
ಕಾರ್ಖಾನೆ ಕಾರ್ಯಪಾಲಕ ನಿದೇರ್ಶಕ ಅನೂಪ್ ಕುಮಾರ್ ಮಹಿಳಾ ದಿನಾಚರಣೆ ಉದ್ಘಾಟಿಸಿದರು. ಸಂಘದ ಮಹಿಳೆಯರಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಾನವ ಸಂಪನ್ಮೂಲ ಇಲಾಖೆ ಮುಖ್ಯ ಮಹಾಪ್ರಬಂಧಕ ಬಿ.ವಿಶ್ವನಾಥ್, ಪ್ರಭಾರಿ ಮಹಾಪ್ರಬಂಧಕ (ಸ್ಥಾವರ) ಟಿ. ರವಿಚಂದ್ರನ್, ಇಸ್ಟಾತ್ ಮಹಿಳಾ ಸಮಾಜದ ಅಧ್ಯಕ್ಷೆ ನಿಶಾ ಶ್ರೀವಾಸ್ತವ, ಉಪಾಧ್ಯಕ್ಷೆ ಪಂಕಜ ವಿಶ್ವನಾಥ್, ಕಾರ್ಯದರ್ಶಿ ಈಶ್ವರಿ ಕುತಲನಾಥನ್, ಖಜಾಂಚಿ ವಿನೋದ ಇಳಯರಾಜ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರತಿಭಾ ರಘುನಾಥ್, ಜಂಟಿ ಕಾರ್ಯದರ್ಶಿ ಶ್ರವಂತಿ ಅನೀಲ್ ರೆಡ್ಡಿ ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ ಆರಂಭಕ್ಕೂ ಮೊದಲು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಲಾಯಿತು. ಕಾರ್ಖಾನೆಯ ಮಹಿಳಾ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.