ಮಾ.೨೩ರಿಂದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕಳಸಾರೋಹಣ, ಚಂಡಿಕಾ ಹೋಮ
ಭದ್ರಾವತಿ: ಹಳೇನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ಸ್ವಾಮಿಗಳವರು ಹಾಗು ವಡ್ಡನಹಾಳ್ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಾ. ೨೩ ರಿಂದ ೨೫ರವರೆಗೆ ಕಳಸಾರೋಹಣ ಮತ್ತು ಚಂಡಿಕಾ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
ಶ್ರೀ ಕಾಳಿಕಾಂಬ ಸೇವಾ ಸಮಿತಿಯಿಂದ ೨೩ರ ಸೋಮವಾರ ಸಂಜೆ ವಾಸ್ತು, ನವಗ್ರಹ, ರಾಕ್ಷೆಘ್ನ, ಅಘೋರ, ಸುದರ್ಶನ ಹೋಮ, ಬಲಿಪೂಜೆ ಮತ್ತು ಕಲಶ ಪ್ರತಿಷ್ಠಾಪನೆ ಮತ್ತು ೨೪ರ ಮಂಗಳವಾರ ಬೆಳಿಗ್ಗೆ ಶ್ರೀ ಕಾಳಿಕಾದೇವಿ ವಿಗ್ರಹಕ್ಕೆ ಅಷ್ಟಬಂಧ ಹಾಕುವುದು, ಪ್ರಾಣ ಷ್ಠಾಪನೆ, ದೇವಿಯ ಶ್ರೀ ಪಾದುಕ ಪ್ರತಿಷ್ಠಾಪನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಹಾಗು ೨೫ರ ಬುಧವಾರ ಬೆಳಿಗ್ಗೆ ಶ್ರೀ ಕಾಳಿಕಾದೇವಿ ವಿಮಾನ ಗೋಪುರಕ್ಕೆ ಕಳಸಾರೋಹಣ, ಶ್ರೀ ಚಂಡಿಕಾ ಹೋಮ ಆಯೋಜಿಸಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಧಾರ್ಮಿಕ ಆಚರಣೆಗಳಿಗೆ ಚಾಲನೆ ನೀಡಲಿದ್ದು, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ರಾಜ್ಯ ವಿಶ್ವಕರ್ಮ ಅಭಿವೃಧ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಎಸ್. ತಿಪ್ಪೇಸ್ವಾಮಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಿ. ವೆಂಕಟರಮಣ ಶೇಟ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
