ಹೆಡ್‌ಕಾನ್‌ಸ್ಟೇಬಲ್ ಜಿ. ರಾಘವೇಂದ್ರರಿಗೆ ಮುಖ್ಯಮಂತ್ರಿ ಪದಕ : ಉಪವಿಭಾಗದಲ್ಲಿ ಸಂತಸ

ಭದ್ರಾವತಿ : ಹಳೇನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿ. ರಾಘವೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಪೊಲೀಸ್ ಉಪವಿಭಾಗದಲ್ಲಿ ಸಂತಸ ಮನೆ ಮಾಡಿದೆ. 
೨೦೦೭ರಲ್ಲಿ ಕಾನ್‌ಸ್ಟೇಬಲ್ ಹುದ್ದೆಯಲ್ಲಿ ಕರ್ತವ್ಯ ಆರಂಭಿಸಿದ ರಾಘವೇಂದ್ರ ಅವರು ಸಾಗರ ಗ್ರಾಮಾಂತರ, ನಂತರ ೨೦೧೪ರಿಂದ ಭದ್ರಾವತಿ ಗ್ರಾಮಾಂತರ ಮತ್ತು ನ್ಯೂಟೌನ್ ಠಾಣೆ, ಪ್ರಸ್ತುತ ಹಳೇನಗರ ಪೊಲೀಸ್‌ಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 
೨೦೨೦ರಲ್ಲಿ ಕಾನ್‌ಸ್ಟೇಬಲ್ ಹುದ್ದೆಯಿಂದ ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಮುಂಬಡ್ತಿ ಪಡೆದುಕೊಂಡಿದ್ದಾರೆ. ೧೯ ವರ್ಷಗಳ ವೃತ್ತಿ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಇವರಿಗೆ ಈ ಹಿಂದೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಹ ಸನ್ಮಾನಿಸಿ ಗೌರವಿಸಲಾಗಿತ್ತು. 
ಮುಖ್ಯಮಂತ್ರಿ ಪದಕ ಪುರಸ್ಕೃತರಾದ ರಾಘವೇಂದ್ರ ಅವರಿಗೆ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ, ಎಸ್. ರಮೇಶ್ ಕುಮಾರ್ ಮತ್ತು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಅಭಿನಂದಿಸಿದ್ದಾರೆ. 
 
ಡಿ೨೯-ಬಿಡಿವಿಟಿ೧
ಜಿ. ರಾಘವೇಂದ್ರ 


Ananthakumara, Reporter, Kannadaprabha,
NDK/31A, Near, Sri Satyasayi Baba school,
Newtown, Bhadravathi:-577301(Tq)
Shimoga(Dis)
Mob: 9738801478
: 9482007466