ಕೆ. ಗೋವಿಂದರಾಜು ನಿಧನ
ಕೆ. ಗೋವಿಂದರಾಜು
ಭದ್ರಾವತಿ: ತಾಲೂಕಿನ ಗುಂಡಪ್ಪ ಕ್ಯಾಂಪ್ (ರಂಗನಾಥಪುರ ) ನಿವಾಸಿ, ಅಲೆಮನೆ ಮಾಲೀಕರು ಹಾಗೂ ಜಮೀನ್ದಾರರು ಕೆ. ಗೋವಿಂದರಾಜು(೭೦) ಶನಿವಾರ ಬೆಳಗಿನ ಜಾವ ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಇವರು ಲಯನ್ಸ್ ಕ್ಲಬ್ ಜಿಲ್ಲಾ ಕೋಂ ಆರ್ಡಿನೇಟರ್ ಎನ್. ಶ್ರೀನಿವಾಸನ್‌ರವರ ಮಾವ. ಇವರ ಅಂತ್ಯಕ್ರಿಯೆ ಮಾ.೨೯ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
ಗೋವಿಂದರಾಜುರವರ ನಿಧನಕ್‌ಕೆ ಅಲೆಮನೆ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.