ಗಂಗೂರು ಶ್ರೀ ಉದ್ದಾಮ ಕ್ಷೇತ್ರದಲ್ಲಿ ಮಾ.೨೮ರವರೆಗೆ ೩ ದಿನಗಳ ಕಾಲ ವಾರ್ಷಿಕ ಜಾತ್ರಾ ಮಹೋತ್ಸವ
ಭದ್ರಾವತಿ ತಾಲೂಕಿನ ಗಂಗೂರಿನ ಪುರಾಣ ಪ್ರಸಿದ್ದ ಶ್ರೀ ಉದ್ದಾಮ ಕ್ಷೇತ್ರದ ಶ್ರೀ ಉದ್ದಾಂಜನೇಯ ಸ್ವಾಮಿ
ಭದ್ರಾವತಿ : ತಾಲೂಕಿನ ಗಂಗೂರಿನ ಪುರಾಣ ಪ್ರಸಿದ್ದ ಶ್ರೀ ಉದ್ದಾಮ ಕ್ಷೇತ್ರದ ಶ್ರೀ ಉದ್ದಾಂಜನೇಯ ಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೨೬ ರಿಂದ ೨೮ರವರೆಗೆ ೩ ದಿನಗಳ ಕಾಲ ಜರುಗಲಿದೆ.
ಮಾ.೨೬ರ ಗುರುವಾರ ಬೆಳಗ್ಗೆ ೮-೩೦ಕ್ಕೆ ಕುಡಿಪೂಜೆ, ಧ್ವಜಾರೋಹಣ, ಉದ್ದಾಮನಿಗೆ ಪಂಚಾಮೃತ ರುದ್ರಾಭಿಷೇಕ, ಗಣಪತಿ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಅಷ್ಟದ್ರವ್ಯ ಮಹಾ ಗಣಪತಿಹೋಮ, ಪುರಸ್ಸರ ರುದ್ರಹೋಮ, ೧೦೮ ದಂಪತಿಗಳಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಕೆಂಚಾಂಬಿಕ ಮೂಲಮಂತ್ರ ಹೋಮ ನಂತರ ಉದ್ದಾಮನಿಗೆ ವಿವಿಧ ಹಣ್ಣುಗಳಿಂದ ಅಲಂಕಾರ ನಡೆಯಲಿದೆ. ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಸಂಜೆ ಮಂಡಲಪೂಜೆ, ವಾಸ್ತುರಾಕ್ಲೋಘ್ನ ಸುದರ್ಶನಹೋಮ, ಲಕ್ಷ್ಮೀನೃಸಿಂಹ ಹೋಮ, ದಿಗ್ಬಲಿ, ಪ್ರಾಕಾರೋತ್ಸವ, ಅಷ್ಟಾವ ಧಾನ ಸೇವೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಲಿವೆ.
ಮಾ.೨೭ರ ಶುಕ್ರವಾರ ಬೆಳಗ್ಗೆ ೬.೩೦ಕ್ಕೆ ಬೆಳಿಗ್ಗೆ ೧೦೦೮ ಕಳಶಗಳ ಗಂಗಾಪೂಜೆ, ಗಂಗಾ ಕಳಶಗಳ ಮೆರವಣಿಗೆ, ಕುಂಭಾಭಿಷೇಕ, ಮೋದಕ ಅಥರ್ವಶೀರ್ಷ ಗಣಪತಿ ಹೋಮ, ರಾಮತಾರಕ ಹೋಮ, ಬನ್ನಿಮಹಾಕಾಳಿ ಹೋಮ, ನಂತರ ಉದ್ದಾಮನಿಗೆ ವಿವಿಧ ಹೂವುಗಳಿಂದ ಅಲಂಕಾರ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಸಂಜೆ ೪ಕ್ಕೆ ಶ್ರೀ ರಾಮತಾರಕ ಜಪ ಸಂಜೆ ೬ಕ್ಕೆ ಪಂಚ ದುರ್ಗಾದೀಪ ನಮಸ್ಕಾರ ವನದುರ್ಗ ಹೋಮ, ವಿಜಯ ದುರ್ಗ ಹೋಮ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ನಡೆಯಲಿದೆ.
ಮಾ.೨೮ರ ಶನಿವಾರ ಬೆಳಗ್ಗೆ ೬ ಗಂಟೆಗೆ ಉದ್ದಾಮನಿಗೆ ಪಂಚಾಮೃತ ಅಭಿಷೇಕ, ತುಪ್ಪ, ಜೇನುತುಪ್ಪ, ಎಳನೀರು, ಕಬ್ಬಿನ ಹಾಲು ಮತ್ತು ರುದ್ರಾಭಿಷೇಕ. ಬೆಳಗ್ಗೆ ೯ ಗಂಟೆಯಿಂದ ಮಹಾಗಣಪತಿ ಹೋಮಾರಂಭ, ಶನಿ ಶಾಂತಿಹೋಮ, ಮಾರುತಿ ಮೂಲ ಮಂತ್ರ ಹೋಮ, ಕೆಂಚರಾಯ ಮೂಲಮಂತ್ರ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ನಂತರ ಉದ್ದಾಮನಿಗೆ ಬೆಣ್ಣೆ ಅಲಂಕಾರ, ಮಧ್ಯಾಹ್ನ ಮಹಾ ಮಂಗಳಾರತಿ, ಮಹಾಪ್ರಸಾದ ವಿನಿಯೋಗ, ಸಂಜೆ ಶ್ರೀವಲ್ಲಿಸಹಿತ ಸುಬ್ರಹ್ಮಣ್ಯ ಶಕ್ತಿಧರ ಹೋಮ, ಆಶ್ಲೇಷ ಬಲಿ ಪೂಜೆ, ಮಹಾ ಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ಜರುಗಲಿವೆ
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸುವಂತೆ ಶ್ರೀ ಉದ್ದಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಜಯಶಂಕರ್ ಕೋರಿದ್ದಾರೆ.