ನಾಮನಿರ್ದೇಶನ ಸದಸ್ಯರಾಗಿ ವಿಲ್ಸನ್ ಬಾಬು, ಎಂ.ಜಿ ರಾಮಚಂದ್ರ ನೇಮಕ
ಎ. ವಿಲ್ಸನ್ ಬಾಬು
ಭದ್ರಾವತಿ : ನಗರಸಭೆ ಉಳಿದ ಅವಧಿಗೆ ನೂತನ ನಾಮನಿರ್ದೇಶಿತ ಸದಸ್ಯರಾಗಿ ಹುಡ್ಕೋ ಕಾಲೋನಿ ನಿವಾಸಿ, ಯುವ ಮುಖಂಡರಾದ ಎ. ವಿಲ್ಸನ್ ಬಾಬು ಮತ್ತು ನ್ಯೂಟೌನ್ ಆಂಜನೇಯ ಆಗ್ರಹಾರ ನಿವಾಸಿ ಎಂ.ಜಿ ರಾಮಚಂದ್ರ ನೇಮಕಗೊಂಡಿದ್ದಾರೆ.
ನಗರಸಭೆಗೆ ಎ. ವಿಲ್ಸನ್ ಬಾಬು ಮತ್ತು ಎಂ.ಜಿ ರಾಮಚಂದ್ರ ಸೇರಿದಂತೆ ಒಟ್ಟು ೫ ಜನರನ್ನು ನಾಮನಿರ್ದೇಶನಗೊಳಿಸಲಾಗಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.
ನೂತನ ನಾಮನಿರ್ದೇಶಿತ ಸದಸ್ಯರಾದ ವಿಲ್ಸನ್ ಬಾಬು ಮತ್ತು ರಾಮಚಂದ್ರ ಅವರಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಾನ್ಸಿಸ್, ಮುಖಂಡರಾದ ದಾಸ್, ಆನಂದ, ಜಾನ್ಸನ್, ಅಪ್ಪು, ಬ್ಲೆಸ್ಸಿಂಗ್. ಜಿ, ಸುಬ್ರಮಣಿ, ಪ್ರದೀಪ್, ಬಾಬು, ಚಂದ್ರು, ಮುರುಳಿ, ಬಿಪಿಎಲ್ ಸಂಘದ ಅಧ್ಯಕ್ಷ ಸಂಪತ್‌ಕುಮಾರ್, ಅಭಿ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. ಅಲ್ಲದೆ ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕೊಳ್ಳಲು ಕಾರಣಕರ್ತರಾದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಹಿರಿಯ ಸದಸ್ಯರಾದ ಬಿ.ಕೆ ಮೋಹನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
.jpeg)