ವಿಐಎಸ್‌ಎಲ್ ನಿವೃತ್ತ ನೌಕರ, ರಂಗಭೂಮಿ ಕಲಾವಿದ ಲಕ್ಷ್ಮೀಪತಿ ನಿಧನ

ಲಕ್ಷ್ಮೀಪತಿ
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ರಂಗಭೂಮಿ ಕಲಾವಿದ ಲಕ್ಷ್ಮೀಪತಿ(೭೬) ಬುಧವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ವಿಐಎಸ್‌ಎಲ್ ಕಾರ್ಖಾನೆಯ ಬ್ಲಾಸ್ಟ್ ಫರ್ನೇಸ್ ಮೆಕ್ಯಾನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ರಂಗಭೂಮಿ ಕಲಾವಿದರಾದ ಇವರು ನವೋದಯ ಕಲಾ ಸಂಘದಲ್ಲಿ ತೊಡಗಿಸಿಕೊಂಡು ಅನೇಕ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸುವ ಮೂಲಕ ರಾಜ್ಯಮಟ್ಟದ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. 
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿರ್ದೇಶಕ ನರಸಿಂಹಚಾರ್, ನಿವೃತ್ತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮುಕುಂದಪ್ಪ, ನಿವೃತ್ತ ಕಾರ್ಮಿಕ, ಚಲನಚಿತ್ರ ನಟ ದೊಡ್ಡಣ್ಣ, ಪ್ರಮುಖರಾದ ರಾಜಪ್ಪ, ಚಿಕ್ಕ ಕರಿಯಪ್ಪ, ಈಶ್ವರಪ್ಪ, ಕಾರ್ಮಿಕರ ಸಂಘದ ಅಮೃತ್ , ರಂಗ ಕಲಾವಿದರಾದ ದಿವಾಕರ್‌ ಮತ್ತು  ತಮಟೆ ಜಗದೀಶ್ ಹಾಗು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.