ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ೧೧೯ನೇ ಜಯಂತಿ : ಅನ್ನದಾಸೋಹ
ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಾಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ೧೧೯ನೇ ಜಯಂತಿ, ದಾಸೋಹ ದಿನ ಬುಧವಾರ ಭದ್ರಾವತಿ ನಗರದಲ್ಲಿ ಆಚರಿಸಲಾಯಿತು.
ಭದ್ರಾವತಿ: ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಾಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ೧೧೯ನೇ ಜಯಂತಿ, ದಾಸೋಹ ದಿನ ಬುಧವಾರ ನಗರದಲ್ಲಿ ಆಚರಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷರಾದ ಸಿದ್ದಲಿಂಗಯ್ಯರವರ ನೇತೃತ್ವದಲ್ಲಿ ತಮಿಳ್ ಯೂತ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಪೆಟ್ರೋಲ್ ಬಂಕ್‌ನಲ್ಲಿ ವಯೋವೃದ್ಧರು, ನಿರ್ಗತಿಕರಿಗೆ ಅನ್ನದಾನ ಮಾಡುವ ಮೂಲಕ ದಾಸೋಹ ದಿನ ಆಚರಿಸಲಾಯಿತು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಕೊಡುಗೆ ಅನನ್ಯವಾಗಿದೆ. ಸದಾ ಕಾಲ ಅವರ ಸ್ಮರಣೆಯೊಂದಿಗೆ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ಪ್ರಮುಖರಾದ ನಂದಿನಿ ಹೋಟೆಲ್ ಮಾಲೀಕ ಮಹಾದೇವ್, ನಾಗರತ್ನ ಸಿದ್ದಲಿಂಗಯ್ಯ, ಮಹಾಸಭಾ ಯುವ ಘಟಕದ ಮಾಜಿ ಅಧ್ಯಕ್ಷ ಎಚ್. ಮಂಜುನಾಥ್, ಲಕ್ಷ್ಮೀಕಾಂತ್ ಹಾಗೂ ತಮಿಳ್ ಯೂತ್ಸ್ ಅಸೋಸಿಯೇಷನ್ ಕೇಶವ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.jpg)