ಅಂಬೇಡ್ಕರ್, ವಿಶ್ವೇಶ್ವರಾಯ ಇಬ್ಬರು ಮಹನೀಯರ ಬದುಕು ಪ್ರತಿಯೊಬ್ಬರಿಗೂ ಆದರ್ಶ : ಬಿ. ವಿಶ್ವನಾಥ್
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.
ಭದ್ರಾವತಿ : ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಸರ್.ಎಂ ವಿಶ್ವೇಶ್ವರಾಯ ಈ ಇಬ್ಬರು ಮಹನೀಯರ ಬದುಕು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ ಎಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯ ಮಹಾಪ್ರಬಂಧಕ(ಎಚ್.ಆರ್), ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಬಿ. ವಿಶ್ವನಾಥ್ ಹೇಳಿದರು.
ಅವರು ಕಾರ್ಖಾನೆಯಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಮತ್ತು ವಿಶ್ವೇಶ್ವರಾಯರವರ ಬಾಲ್ಯ ಜೀವನ, ವಿದ್ಯಾಭ್ಯಾಸ, ಅವರು ಅನುಭವಿಸಿದ ನೋವು, ಅವಮಾನ ಹಾಗು ಸಾಧನೆ ಕುರಿತು ವಿವರಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವಂತೆ ಕರೆ ನೀಡಿದರು.
ಪ್ರಭಾರಿ ಮಹಾಪ್ರಬಂಧಕರು(ಸ್ಥಾವರ) ಟಿ. ರವಿಚಂದ್ರನ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ) ಎಂ. ಸುಬ್ಬರಾವ್, ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ) ಮತ್ತು ಎಸ್.ಸಿ/ಎಸ್.ಟಿ ಕಾರ್ಮಿಕರ ಸಮನ್ವಯಾಧಿಕಾರಿ ಎಲ್. ಸುಂದರ ವಡಿವೇಲು, ಸಹಾಯಕ ಮಹಾಪ್ರಬಂಧಕರು (ನಗರಾಡಳಿತ ಮತ್ತು ಸಾರ್ವಜನಿಕ ಸಂಪರ್ಕ) ಹಾಗು ಅಧ್ಯಕ್ಷರು, ಎಸ್.ಸಿ/ಎಸ್.ಟಿ ಸಂಘ ನವೀನ್ ರಾಹುಲ್, ಅಧ್ಯಕ್ಷರು, ಕಾರ್ಮಿಕರ ಸಂಘ ಪಿ. ಅಮೃತ್ ಕುಮಾರ್ ಹಾಗು ಅಧ್ಯಕ್ಷರು, ಅಧಿಕಾರಿಗಳ ಸಂಘ ಅಜಯ್ ಡಿ. ಸೋಂಕುವಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಗದೀಶ್ ಬಡಿಗೇರ್, ಕೆ. ಲಕ್ಷ್ಮಣ, ಎಲ್. ಮಧುಕುಮಾರ್, ಪ್ರೇಮಬಾಯಿ, ರಮ್ಯ, ಬಿ.ಎಸ್. ವಸಂತ್, ತ್ರಿವೇಣಿ, ಹೇಮಾವತಿ ಮತ್ತು ಜಾಹ್ನವಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಚಂದ್ರಕಾಂತ್ ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ರಮ್ಯಾ, ಶೈಲಶ್ರೀ ಮತ್ತು ಪ್ರೇಮಬಾಯಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಬಂಧಕ(ಮಾನವ ಸಂಪನ್ಮೂಲ) ಎಮ್.ಎಲ್. ಯೋಗೀಶ್ ಸ್ವಾಗತಿಸಿ, ವಂದಿಸಿದರು.
೨೦೨೫-೨೬ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ಕಾರ್ಖಾನೆಯ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.