ಮಹಿಳೆಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ, ಅವಮಾನ, ಜೀವ ಬೆದರಿಕೆ : ೫ ಮಂದಿಗೆ ೨ ಲಕ್ಷ ಜೈಲು ಶಿಕ್ಷೆ


ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ, ಅವಮಾನ, ಜೀವ ಬೆದರಿಕೆ, ೫ ಮಂದಿಗೆ ೨ ಲಕ್ಷ ಜೈಲು ಶಿಕ್ಷೆ 
    ಭದ್ರಾವತಿ: ಅಕ್ರಮವಾಗಿ ಮನೆಗೆ ಪ್ರವೇಶಿಸಿ ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಆಕೆಯ ಜಡೆ ಹಾಗು ಸೀರೆ ಎಳೆದು ಅವಮಾನಗೊಳಿ ಕೊಲೆ ಬೆದರಿಕೆ ಹಾಕಿದ್ದ ೫ ಮಂದಿಗೆ ೨ ವರ್ಷ ಜೈಲು ಶಿಕ್ಷೆ ಹಾಗು ಒಟ್ಟು ೧ ಲಕ್ಷ ರು. ದಂಡ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. 
    ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ  ೬ ಜೂನ್ ೨೦೨೩ ರಂದು ರಾತ್ರಿ ೧೧.೪೫ ಸಮಯದಲ್ಲಿ ನವೀನ(೨೫), ಮನು(೩೧), ಕೆ. ಸಂತೋಷ(೩೧), ವಿ. ಮಂಜುನಾಥ(೩೩) ಹಾಗೂ ಅಭಿಷೇಕ್(೨೪) ಎಂಬುವರು ಗ್ರಾಮದ ರಾಧಾ(೩೫)ರವರ ಮನೆಗೆ ಅವರ ಪತಿ ವೆಂಕಟೇಶ್‌ರನ್ನ ಹುಡುಕಿಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ರಾಧಾರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವರ ಜಡೆ ಹಾಗು ಸೀರೆ ಎಳೆದು ಅವಮಾನಗೊಳಿ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ  ಜಿತೇಂದ್ರ ಕುಮಾರ ದಯಾಮರವರು ಪ್ರಕರಣದ ದೋಷಾರೋಪಣಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ತಲಾ ೨ ವರ್ಷ ಜೈಲು ಶಿಕ್ಷೆ ಒಟ್ಟು ೧ ಲಕ್ಷ ರು. ದಂಡ ವಿಧಿಸಿ ತೀರ್ಪುನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ ರತ್ನಮ್ಮ ವಾದ ಮಂಡಿಸಿದ್ದರು.