ನೀರಿನ ಕಂದಾಯ ಕಡಿಮೆಗೊಳಿಸಿ, ಖಾಲಿ ನಿವೇಶನಗಳಿಗೆ ತ್ಯಾಜ್ಯ ಶುಲ್ಕ ವಿಧಿಸದಿರಿ

ಮನೆ ಮಾಲೀಕರ ಸಂಘದಿಂದ ನಗರಸಭೆ ಅಧ್ಯಕ್ಷರಿಗೆ ಮನವ


ಭದ್ರಾವತಿ ನಗರಸಭೆ ಆಡಳಿತ ಅವೈಜ್ಞಾನಿಕವಾಗಿ ನೀರಿನ ಕಂದಾಯ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು, ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ಶುಲ್ಕ ವಿಧಿಸುವುದನ್ನು ಕೈಬಿಡಬೇಕು ಹಾಗು ಆಸ್ತಿ ತೆರಿಗೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸ ಸರಿಪಡಿಸಬೇಕೆಂದು ಆಗ್ರಹಿಸಿ ಶನಿವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರಿಗೆ ಮನೆ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರಸಭೆ ಆಡಳಿತ ಅವೈಜ್ಞಾನಿಕವಾಗಿ ನೀರಿನ ಕಂದಾಯ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು, ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ಶುಲ್ಕ ವಿಧಿಸುವುದನ್ನು ಕೈಬಿಡಬೇಕು ಹಾಗು ಆಸ್ತಿ ತೆರಿಗೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸ ಸರಿಪಡಿಸಬೇಕೆಂದು ಆಗ್ರಹಿಸಿ ಶನಿವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರಿಗೆ ಮನೆ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. 
    ನಗರಸಭೆ ಆಡಳಿತ ಏ.೧ರಿಂದ ಯಾವುದೇ ಮುನ್ಸೂಚನೆ ನೀಡದೆ ಅವೈಜ್ಞಾನಿಕವಾಗಿ ನೀರಿನ ಕಂದಾಯ ಶೇ.೫೦ರಷ್ಟು ಹೆಚ್ಚಳ ಮಾಡಿರುವುದು ಖಂಡನೀಯ. ಈ ಸಂಬಂಧ ಈಗಾಗಲೇ ತಮಗೂ ಹಾಗು ಶಾಸಕರಿಗೂ ಮನವಿ ಮಾಡಲಾಗಿದ್ದು, ಸಾಮಾನ್ಯಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಾಗರೀಕರಿಗೆ ಹೊರೆಯಾಗದಂತೆ ನೀರಿನ ಶುಲ್ಕ ಹೆಚ್ಚಳ ಮಾಡಿರುವುದನ್ನು ಕಡಿಮೆಗೊಳಿಸಲು ಒಮ್ಮತದ ತೀರ್ಮಾನ ಕೈಗೊಳ್ಳಬೇಕೆಂದು ಕೋರಲಾಯಿತು. 
    ಆಸ್ತಿ ತೆರಿಗೆ ಪಾವತಿಸುವ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಿಗೂ ಘನ ತ್ಯಾಜ್ಯ ಶುಲ್ಕ ವಿಧಿಸಲಾಗುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಅಧಿಕಾರಿಗಳು ಇಲ್ಲ ಸಲ್ಲದ ಆದೇಶಗಳನ್ನು ಸೃಷ್ಟಿಸಿ ನಾಗರೀಕರಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ. ತಕ್ಷಣ ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ಶುಲ್ಕ ವಿಧಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು. 
    ನಗರಸಭೆಯಿಂದ ವಾಡಿಕೆಯಂತೆ ಆಸ್ತಿ ತೆರಿಗೆ ಶೇ.೩ರಷ್ಟು ಹೆಚ್ಚಳ ಮಾಡುತ್ತಿರುವುದಕ್ಕೆ ವಿರೋಧವಿಲ್ಲ. ಆದರೆ ಒಟ್ಟಾರೆ ಆಸ್ತಿ ತೆರಿಗೆಯಲ್ಲಿ ಶೇ.೧೦ರಷ್ಟು ತೆರಿಗೆ ಹೆಚ್ಚಳವಾಗುತ್ತಿದೆ. ಇದನ್ನು ಸರಿಪಡಿಸಿ ನಿರ್ದಿಷ್ಟವಾಗಿ ಶೇ.೩ರಷ್ಟು ತೆರಿಗೆ ಮಾತ್ರ ವಿಧಿಸಬೇಕೆಂದು ಮನವಿ ಮಾಡಲಾಯಿತು. 
    ಸಂಘದ ಗೌರವಾಧ್ಯಕ್ಷ ಆರ್. ಇಂದುಶೇಖರಯ್ಯ, ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಸಲಹೆಗಾರ ಎಲ್.ವಿ ರುದ್ರಪ್ಪ, ಉಪಾಧ್ಯಕ್ಷ ಜಿ. ರಾಮು, ಕಾರ್ಯದರ್ಶಿ ಡಿ. ನಾಗೋಜಿರಾವ್, ಸಹ ಕಾರ್ಯದರ್ಶಿ ಆರ್. ಮಲ್ಲಿಕಾಂಬ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.