ಜೆಡಿಎಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ರಾಜಕಾರಣಿ ಎನ್. ರಾಮಕೃಷ್ಣ ನೇಮಕ
ಭದ್ರಾವತಿ ತಾಲೂಕು ಜನತಾದಳ(ಜಾತ್ಯಾತೀತ) ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ರಾಜಕಾರಣಿ ಎನ್. ರಾಮಕೃಷ್ಣಪ್ಪ ನೇಮಕಗೊಂಡಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಬಿಎಲ್‌ಎ-೨ ಕಾರ್ಯಾಗಾರದಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಭದ್ರಾವತಿ: ತಾಲೂಕು ಜನತಾದಳ(ಜಾತ್ಯಾತೀತ) ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ರಾಜಕಾರಣಿ ಎನ್. ರಾಮಕೃಷ್ಣಪ್ಪ ನೇಮಕಗೊಂಡಿದ್ದಾರೆ.
ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನಿರ್ದೇಶಿಸುವ ಮೂಲಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಆದೇಶಿಸಿದ್ದಾರೆ.
ನಗರದ ಅಪ್ಪರ್ ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪ್ರದೇಶ ಜನತಾದಳ(ಜಾತ್ಯತೀತ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಬಿಎಲ್‌ಎ-೨ ಕಾರ್ಯಾಗಾರದಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಪಕ್ಷದ ರಾಜ್ಯ ವಕ್ತಾರ ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಕೋರ್ ಕಮಿಟಿ ಸದಸ್ಯೆ ಶಾರದ ಅಪ್ಪಾಜಿ, ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತಾ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಸದಸ್ಯೆ ಮಂಜುಳ ಸುಬ್ಬಣ್ಣ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಮಾಜಿ ಸದಸ್ಯರಾದ ಮೋಹನ್ ರಾವ್, ಎಚ್.ಬಿ ರವಿಕುಮಾರ್, ಆನಂದ್, ಮುಖಂಡರಾದ ಟಿ. ಚಂದ್ರೇಗೌಡ, ತಿಮ್ಮೇಗೌಡ, ಧರ್ಮರಾಜ್, ಎನ್. ರಾಮಕೃಷ್ಣ, ಜಯರಾಂ ಗೊಂದಿ, ಎನ್. ಕೃಷ್ಣಪ್ಪ, ಶಿವಾಜಿರಾವ್ ಗಾಯಕ್ವಾಡ್, ಉಮೇಶ್, ಚಂದ್ರಶೇಖರ್, ಪ್ರಕಾಶ್, ಲೋಕೇಶ್, ಜಗದೀಶ್, ಸುರೇಶ್(ಆಟೋ), ಭಾಗ್ಯಮ್ಮ ಮಂಜುನಾಥ್, ಪಾರ್ವತಿ ಬಾಯಿ, ನವೀನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
