ದ್ವಿತೀಯ ಪಿಯುಸಿ : ಶ್ರೀ ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.೯೯.೩೦ ಫಲಿತಾಂಶ
ಬಿ.ಎಸ್ ಸಿಂಚನಾ-೫೮೫
ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೯.೩೦ ಫಲಿತಾಂಶ ಪಡೆದುಕೊಂಡಿದ್ದು, ೮೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಬಾರಿ ೧೪೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ.೯೯.೩೦ ಫಲಿತಾಂಶ ಲಭಿಸಿದೆ. ಅಲ್ಲದೆ ಈ ಕಾಲೇಜು ತಾಲೂಕಿಗೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.
ಜಿ.ಎಸ್ ಸಂಜನಾ-೫೮೫
ಕಾಲೇಜಿನ ಬಿ.ಎಸ್ ಸಿಂಚನಾ-೫೮೫, ಜಿ.ಎಸ್ ಸಂಜನಾ-೫೮೫, ನಿಶಾಂತ್ ಅಂಜುಮ್-೫೮೨, ಎಂ. ಆರ್ಮಾನ್-೫೮೦, ಎ. ಕೃತಿಕಾ-೫೮೦, ಪಿ. ರಕ್ಷಿತಾ ಗೌಡ-೫೭೯, ರುತ್ವಿಕಾ ಎ. ಗೌಡ-೫೭೯, ಸಂಜು.ಎಂ-೫೭೯, ವರ್ಷಿಣಿ. ಎಂ-೫೭೯ ಮತ್ತು ಭರತ್. ಎನ್-೫೭೫ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗು ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.
ನಿಶಾಂತ್ ಅಂಜುಮ್-೫೮೨