ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿಗೆ ೮ ಜನ ನಾಮನಿರ್ದೇಶನ
ಭದ್ರಾವತಿ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಕೋರಿಕೆ ಮೇರೆಗೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪರವರ ಶಿಫಾರಸ್ಸಿನಂತೆ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿಗೆ ನೂತನವಾಗಿ ೮ ಜನರನ್ನು ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಲಾಗಿದೆ.
ಭೋವಿಕಾಲೋನಿ ನಿವಾಸಿ ವೈ. ಮಂಜುನಾಥ್, ಹಳೇಬುಳ್ಳಾಪುರ ನಿವಾಸಿ ಐಸಾಕ್ ಲಿಂಕನ್, ಕನಕನಗರದ ನಿವಾಸಿ ರೂಪ ನಾರಾಯಣ, ಜಟ್‌ಪಟ್ ನಗರ ಆಶ್ರಯ ಕಾಲೋನಿ ನಿವಾಸಿ ಮೊಹಮ್ಮದ್ ಸಲ್ಮಾನ್, ಭೂತನಗುಡಿ ನಿವಾಸಿಗಳಾದ ಜೆ.ಎಂ ರಾಜ, ವಾಹಿದ್ ಖಾನ್, ವೀರಾಪುರ ನಿವಾಸಿ ಡಾ. ಕಲೀಂವುದ್ದಿನ್ ಮತ್ತು ಹನುಮಂತ ನಗರ ನಿವಾಸಿ ಅನಿತಾ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.
ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿಗೆ ನೂತನವಾಗಿ ನಾಮನಿರ್ದೇಶನಗೊಂಡಿರುವ ೮ ಜನ ಸದಸ್ಯರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.
