ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಮೇ.8ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ, ಮೇ.13ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ
ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2026-27ನೇ ಸಾಲಿನ ಪ್ರವೇಶ ಪಡೆಯಲು (ಎನ್.ಸಿ.ವಿ.ಟಿ ಯೋಜನೆ ಅಡಿಯಲ್ಲಿ) ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮೇ.8ರ ವರೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ದಾಖಲಾತಿ ಪರಿಶೀಲನೆಗೆ ಕೊನೆಯ ದಿನ ಮೇ.9 ಆಗಿರುತ್ತದೆ. ಪ್ರವೇಶ ಬಯಸುವಂತಹ ಅಭ್ಯರ್ಥಿಗಳು Web:www.cite.karnataka.gov.in ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಭದ್ರಾವತಿ. ಪ್ರಾಚಾರ್ಯರನ್ನು ಸಂಪರ್ಕಿಸುವುದು. 08282-200080 ಅಥವಾ 9980129595 ಅಥವಾ 9880085914 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಾತ್ರ ತಮ್ಮ ದಾಖಲಾತಿ(ಮೂಲ) ಪರಿಶೀಲನೆಗೆ ಹಾಜರಾಗುವುದು. ಆ ಸಮಯದಲ್ಲಿ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಅರ್ಜಿಗಳ ತಿದ್ದುಪಡಿ ಮತ್ತು ಇಚ್ಛಾನುಸಾರ ತರಬೇತಿ ಸಂಸ್ಥೆಗಳನ್ನು ಹಾಗು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಮೇ.11ರಂದು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಪ್ರಕಟಣೆ. ಮೇ.12ರಂದು ಮೆರಿಟ್ ಪಟ್ಟಿ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಅಭ್ಯರ್ಥಿಯು ತಮ್ಮ ಲಾಗಿನ್ ಮುಖಾಂತರ ಅಕ್ಷೇಪಣೆಯನ್ನು ಸಂಜೆ.5.30ರೊಳಗೆ ತಿಳಿಸುವುದು. ಅಧಿಕಾರಿಗಳು ಮೇ.13ರಂದು ಮೆರಿಟ್ ಪಟ್ಟಿ ಬಗ್ಗೆ ಅಭ್ಯರ್ಥಿಗಳಿಂದ ಸಲ್ಲಿಸಲಾದ ಆಕ್ಷೇಪಣೆಗಳನ್ನು ಸರಿಪಡಿಸುವ ಕಾರ್ಯ ಕೈಗೊಳ್ಳಲಿದ್ದಾರೆ.
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿರುವ ವೃತ್ತಿಗಳು ಹಾಗು ಸ್ಥಾನಗಳು:
ಎರಡು ವರ್ಷದ ವೃತ್ತಿಗಳಾದ ಮೆಕಾನಿಕ್ ಎಲೆಕ್ಟ್ರಿಕ್ ವೆಹಿಕಲ್ -24, ಸಿ.ಎನ್.ಸಿ ಮೆಕಾನಿಕ್ ಟೆಕ್ನಿಷಿಯನ್-24,ವಚ್ಯುಯಲ್ ಅನಾಲಿಸಿಸ್ & ಡಿಸೈನರ್-24, ಎಲೆಕ್ಟ್ರಿಷಿಯನ್-40, ಫಿಟ್ಟರ್-60, ಎಲೆಕ್ಟ್ರಾನಿಕ್ ಮೆಕಾನಿಕ್-24, ಮೆಷಿನಿಷ್ಟ್-40, ಟರ್ನರ್-60, ಮೋಟಾರ್ ವೆಹಿಕಲ್ ಮೆಕಾನಿಕ್-24 ಹಾಗು ಒಂದು ವರ್ಷದ ವೃತ್ತಿಗಳಧ ಇಂಡಸ್ಟ್ರಿಯಲ್ ರೊಬೊಟೆಕ್ & ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟಿಕ್ನಿಷಿಯನ್-20, ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್-10, ಮಾನ್ಯುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ & ಆಟೋಮೇಷನ್-20, ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮ್ ಅಸಿಸ್ಟೆಂಟ್-48, ಮೆಕಾನಿಕ್ ಡೀಸೆಲ್-48, ವೆಲ್ಡರ್-60 ಹಾಗು ವುಡ್ ವರ್ಕ್ ಟೆಕ್ನಿಷಿಯನ್-24.
