ಶ್ರೀ ಮಹಾವಿಷ್ಣು ಮೃತ್ಯುಂಜಯ, ಅಭಯಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳ ಪ್ರತಿಷ್ಠಾಪನೆ
ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ಲೋಕಾರ್ಪಣೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. ೧೦ರ ವಿಜಯನಗರದಲ್ಲಿ ನೂತನವಾಗಿ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ನಿರ್ಮಾಣಗೊಂಡಿದ್ದು, ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. ೧೦ರ ವಿಜಯನಗರದಲ್ಲಿ ನೂತನವಾಗಿ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ನಿರ್ಮಾಣಗೊಂಡಿದ್ದು, ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು.
ಆಲಯ ಪ್ರವೇಶ ಹಾಗು ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆಯ ಪ್ರವೇಶನ, ಗೋಪೂಜೆ, ಗಂಗಾಪೂಜೆ, ಸುಮಂಗಳಿಯರಿಂದ ದೇವರಿಗೆ ಅಭಿಷೇಕ, ಮಹಾಪ್ರತಿಷ್ಠೆ ಮುಂತಾದ ಅಷ್ಟವದಾನ ಸೇವೆ, ಬಿಂಬದರ್ಶನ ಹಾಗು ಪ್ರತಿಷ್ಠಾಪನಾ ಹವನಗಳು ಹಾಗು ಶ್ರೀ ನರಸಿಂಹಸ್ವಾಮಿ ತಾರಕ ಹೋಮ, ಮಹಾ ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು.
ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳನ್ನು ಹಾಗೂ ದೇವಸ್ಥಾನ ಮೇಲ್ಭಾಗದಲ್ಲಿ ೩ ಕಳಸಗಳನ್ನು ಪ್ರತಿಷ್ಠಾಪಿಸಲಾಯಿತು. ಕಾಗದನಗರ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ಭಟ್ ತರಳಿಮಠರವರ ಪ್ರಧಾನ ಪೌರೋಹಿತ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ದೇವಸ್ಥಾನದ ಪ್ರಧಾನ ಅರ್ಚಕ ಎನ್. ಗೋವಿಂದರಾಜುರವರ ಕುಟುಂಬಸ್ಥರು ಈ ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಸದಸ್ಯರಾದ ಮಣಿ ಎಎನ್‌ಎಸ್, ಅನಿತಾ ಮಲ್ಲೇಶ್, ಮುಖಂಡರಾದ ಶಿವು ಪಾಟೀಲ್, ರವಿಕುಮಾರ್ ಸೇರಿದಂತೆ ಹೊಸಮನೆ ಸುತ್ತಮುತ್ತಲಿನ ಭಾಗಗಳಿಂದ ಭಕ್ತರು ಆಗಮಿಸಿದ್ದರು.
