ದ್ವಿಚಕ್ರ ವಾಹನ ಕಳವು : ೩ ತಿಂಗಳ ನಂತರ ದೂರು




    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಮೆಡಿಕಲ್ ಅಂಗಡಿಯೊಂದರ ಬಳಿ ಮೀನು ವ್ಯಾಪಾರಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಘಟನೆ ಸುಮಾರು ೩ ತಿಂಗಳ ನಡೆದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದಿದೆ. 
    ಕೆ. ಪಾರ್ಥಿಬನ್ ಎಂಬುವರು ಬಿ.ಎಚ್ ರಸ್ತೆ ಮೀನುಗಾರರ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸುಮಾರು ೫ ವರ್ಷಗಳ ಹಿಂದೆ ಖರೀದಿಸಲಾಗಿದ್ದ ಹಿರೋ ಸ್ಲೆಂಡರ್ ಫ್ಲಸ್ ದ್ವಿಚಕ್ರವಾಹನವನ್ನು ಪ್ರತಿ ದಿನ ಮನೆಯ ಸಮೀಪದ ಮೆಡ್ ಪ್ಲಸ್ ಮೆಡಿಕಲ್ ಅಂಗಡಿ ಬಳಿ ನಿಲ್ಲಿಸುತ್ತಿದ್ದರು. ಜ.೧೯ರ ಬೆಳಗಿನ ಜಾವ ೩ ಗಂಟೆ ಸಮಯದಲ್ಲಿ ಎಂದಿನಂತೆ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಜ.೨೦ರಂದು ಮೀನು ವ್ಯಾಪಾರಕ್ಕೆ ತೆರಳಲು ಸ್ಥಳಕ್ಕೆ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳುವಾಗಿರುವುದು ತಿಳಿದು ಬಂದಿದೆ. 
    ಸುಮಾರು ೪೦ ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ಕಳ್ಳತನ ಮಾಡಲಾಗಿದ್ದು, ಪತ್ತೆ ಮಾಡಿಕೊಡುವಂತೆ ಏ.೨೪ರಂದು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.