ಸಿಬಿಎಸ್‌ಇ ಪರೀಕ್ಷೆ : ಶ್ರೀ ಸತ್ಯಸಾಯಿ ಜ್ಞಾನಪೀಠ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ


ಎಸ್. ವೈಭವಿ (ಶೇ.೯೪.೨)
    ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಜ್ಞಾನಪೀಠ ಶಾಲೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ೧೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 
    ಒಟ್ಟು ೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಪ್ರಥಮ ದರ್ಜೆಯಲ್ಲಿ ೨೫ ಹಾಗು ದ್ವಿತೀಯ ದರ್ಜೆಯಲ್ಲಿ ೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಮಾಜಿಕ ವಿಜ್ಞಾನದಲ್ಲಿ ೯ ವಿದ್ಯಾರ್ಥಿಗಳು ೯೦ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ. 

ಎ.ವಿ ಚಿರಾಂತ್ ಗೌಡ (ಶೇ.೯೨.೨)
    ಎಸ್. ವೈಭವಿ ಶೇ.೯೪.೨, ಎ.ವಿ ಚಿರಾಂತ್ ಗೌಡ ಶೇ.೯೨.೨, ಎಂ.ಪಿ ಹನಿ ಶೇ.೯೧.೬, ತಸ್ಮಿಯಾ ಶೇ.೯೦.೬ ಹಾಗು ವಿ.ಆರ್ ಕಾರುಣ್ಯ ಶೇ.೯೦.೨ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ. 
    ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಲಭಿಸಲು ಕಾರಣಕರ್ತರಾಗಿರುವ ವಿದ್ಯಾರ್ಥಿಗಳು ಹಾಗು ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗು ಪೋಷಕರಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಮತ್ತು ಶ್ರೀ ಸತ್ಯಸಾಯಿ ಜ್ಞಾನಪೀಠ ಅಭಿನಂದನೆ ಸಲ್ಲಿಸಿವೆ. 

ಎಂ.ಪಿ ಹನಿ (ಶೇ.೯೧.೬)