ಏ.೧೫ರಂದು ನಾದ ಮಣಿನಾಲ್ಕೂರು ಹಾಡುಗಾರಿಕೆ


ನಾದ ಮಣಿನಾಲ್ಕೂರು
    ಭದ್ರಾವತಿ: ನಗರದ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಏ.೧೫ರಂದು ಸಂಜೆ ೬.೩೦ಕ್ಕೆ ವಿಶೇಷ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. 
    ನಾದ ಮಣಿನಾಲ್ಕೂರು ಇವರಿಂದ ಕತ್ತಲ ಹಾಡು ಬೆಳಕಿನೆಡೆಗೆ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಲಾಸಕ್ತರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್ ಕೋರಿದ್ದಾರೆ.