ದ್ವಿತೀಯ ಪಿಯುಸಿ ಪರೀಕ್ಷೆ : ಚಿನ್ಮಯ ಪ್ರಸಾದ್ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ



ಚಿನ್ಮಯ ಪ್ರಸಾದ್
ಭದ್ರಾವತಿ : ಶಿವಮೊಗ್ಗ ನಂದನ ಎಜುಕೇಷನ್ ಟ್ರಸ್ಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿ, ನಗರದ ಹೊಸಮನೆ ನಿವಾಸಿ ಚಿನ್ಮಯ ಪ್ರಸಾದ್. ಜಿ ದ್ವಿತೀಯ ಪಿಯುಸಿ ವಾಣಿಜ್ಯ ವಿಧಾಗದಲ್ಲಿ ಶೇ.೯೨ರಷ್ಟು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 
 ಚಿನ್ಮಯರವರು ಒಟ್ಟು ೬೦೦ ಅಂಕಗಳಿಗೆ ೫೫೦ ಅಂಕಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಮುಂದಿನ ವಿದ್ಯಾಭ್ಯಾಸ ಲೆಕ್ಕ ಪರಿಶೋಧನಾ ಶಾಸ್ತ್ರ ಹಾಗು ನ್ಯಾಯಾಂಗ ಶಾಸ್ತ್ರದ ಕುರಿತು ಒಲವು ಹೊಂದಿರುವುದಾಗಿ ಪತ್ರಿಕೆಗೆ ಚಿನ್ನಯರವರು ಪ್ರತಿಕ್ರಿಯಿಸಿದ್ದಾರೆ. 
  ಚಿನ್ಮಯರವರು ಭಾರತೀಯ ಜನತಾ ಪಕ್ಷದ ನಗರ ಮಂಡಲ ಅಧ್ಯಕ್ಷ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಹಾಗು ವೈದ್ಯೆ ಡಾ. ಆಶಾ ದಂಪತಿರವರ ಪುತ್ರರಾಗಿದ್ದಾರೆ. ನಗರದ ಗಣ್ಯರು ಚಿನ್ಮಯರವರ ಸಾಧನೆಯನ್ನು ಅಭಿನಂದಿಸಿದ್ದಾರೆ.