ಮಸಾಜ್ ಕೇಂದ್ರದಲ್ಲಿ ವೇಶ್ಯಾವಾಟಿಕೆ : ಪೊಲೀಸರ ದಾಳಿ
ಭದ್ರಾವತಿ : ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಸಿದ್ದಾರೂಢ ನಗರದ ಮಸಾಜ್ ಕೇಂದ್ರ(ಸ್ಪಾ ಸೆಂಟರ್)ವೊಂದರ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಿರುವ ಘಟನೆ ನಡೆದಿದೆ.
`ವೆಲ್ನಸ್ ಸ್ಪಾ' ಎಂಬ ಹೆಸರಿನ ಸೆಂಟರ್‌ನಲ್ಲಿ ಬೇರೆಡೆಯಿಂದ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ನಗರ ವೃತ್ತ ನಿರೀಕ್ಷಕಿ ನಾಗಮ್ಮ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸೆಂಟರ್‌ನಲ್ಲಿದ್ದ ಮಹಿಳೆಯರನ್ನು ರಕ್ಷಿಸಲಾಗಿದೆ.
ಹಣದ ಅಮಿಷವೊಡ್ಡಿ ಮಹಿಳೆಯರನ್ನು ಬೇರೆಡೆಯಿಂದ ಕರೆ ತರಲಾಗುತ್ತಿತ್ತು ಎನ್ನಲಾಗಿದೆ. ಸೆಂಟರ್ ಮಾಲೀಕ ಹಾಗು ಕಟ್ಟಡದ ಮಾಲೀಕರ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇಶ್, ಸಿಬ್ಬಂದಿಗಳಾದ ವಿಶಾಲಾಕ್ಷಿ, ಚಿನ್ನಾನಾಯ್ಕ, ರೂಪೇಶ್ ಮತ್ತು ಉಮಾಪತಿ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
