ಜೆಡಿಎಸ್ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳು : ಪುನಃ ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ


ಆರ್. ಕರುಣಾಮೂರ್ತಿ 
    ಭದ್ರಾವತಿ : ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ತಾಲೂಕು ನಗರ ಘಟಕಕ್ಕೆ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದು, ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ ಮುಂದುವರೆದಿದ್ದಾರೆ. 
    ಕಾರ್ಯಾಧ್ಯಕ್ಷರಾಗಿ ಎಸ್.ಕೆ ಉಮೇಶ್, ಉಪಾಧ್ಯಕ್ಷರಾಗಿ ಎಚ್.ಬಿ ರವಿಕುಮಾರ್, ರಾಜು, ದೇವದತ್ತ ಮತ್ತು ಎಸ್.ಪಿ ಮೋಹನ್ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂಧನ್, ಗಿಡ್ಡರಾಮಕೃಷ್ಣಪ್ಪ, ಪ್ರಕಾಶ್, ಮಂಜುನಾಥ್, ಆನಂದ, ಬಿ.ವಿ ಗಿರಿನಾಯ್ಡು ಮತ್ತು ಮಹಾದೇವಿ ಹಾಗು ಕಾರ್ಯದರ್ಶಿಗಳಾಗಿ ಎಸ್.ಎಂ ಶಶಿಧರಗೌಡ, ಪಿ. ನವೀನ್ ಕುಮಾರ್, ರಘು, ಶಿವಲಿಂಗೇಗೌಡ, ಸಾವಿತ್ರಮ್ಮ, ಚಂದ್ರನ್, ಅಜ್ಮಲ್, ನರಸಯ್ಯ, ಅಬ್ದುಲ್ ಇಲಾಹಿ ಮತ್ತು ಎಸ್.ಪಿ ಕಿರಣ್ ಕುಮಾರ್ ನೇಮಕಗೊಂಡಿದ್ದಾರೆಂದು ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.