ಏ.೧೯ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ : ಒಟ್ಟು ೧೫ ಮಂದಿ ಕಣದಲ್ಲಿ
ಭದ್ರಾವತಿ : ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆ ಏ.೧೯ರ ಭಾನುವಾರ ಬೆಳಿಗ್ಗೆ ೮.೩೦ ರಿಂದ ಸಂಜೆ ೪.೩೦ರ ವರೆಗೆ ಹಳೇನಗರದ ಕನಕ ಮಂಟಪ ಮೈದಾನ ಮುಂಭಾಗದ ಪಿ.ಎಂ.ಶ್ರೀ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕಾರಿ ಸಮಿತಿಯ ೪ ಮಹಿಳಾ ಮೀಸಲು ವರ್ಗಕ್ಕೆ ದೇವರ ನರಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್.ಎಸ್ ಮಾಯಮ್ಮ, ತಿಪ್ಲಾಪುರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎಸ್. ಚಿತ್ರ, ಗೊಂದಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಆಸ್ಮಾ ಬೇಗಂ, ಹಳೇನಗರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕೋಕಿಲ ಮತ್ತು ಕಲ್ಲಿಹಾಳ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಿ. ಪಾರ್ವತಮ್ಮ ಸೇರಿದಂತೆ ಒಟ್ಟು ೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
೯ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಗಳಿಗೆ ಅನವೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್.ಎಂ ಜಗದೀಶ್, ಆಟಗಾರಿ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಟಿ. ಪೃಥ್ವಿರಾಜ್, ಹಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಎಸ್ ಮಲ್ಲಿಕಾರ್ಜುನ್, ಹೊಳೆಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಹನುಮಂತಪ್ಪ, ಗೌಳಿಗೆರೆ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಚ್. ಭಾರತಿ, ಅಂತರಗಂಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಕೆಪಿಎಸ್)ಯ ಎಂ.ಸಿ ಆನಂದ, ಜಂಬರಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ. ನಾಗರಾಜ, ಗುಡ್ಡದ ನೇರಲೇಕೆರೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಂ.ಬಿ ಜೈಕುಮಾರ್, ಮಾರುತಿ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವೈ.ಎನ್ ಶ್ರೀಧರ ಗೌಡ ಮತ್ತು ನಾಗತಿಬೆಳಗಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಕೆ ಮೋಹನ್ ಸೇರಿದಂತೆ ಒಟ್ಟು ೧೦ ಮಂದಿ ಕಣದಲ್ಲಿದ್ದಾರೆಂದು ಚುನಾವಣಾಧಿಕಾರಿ ಬಿ.ಜಿ ರಂಗಸ್ವಾಮಿ ಮತ್ತು ಸಹಾಯಕ ಚುನಾವಣಾಧಿಕಾರಿ ಇಮ್ತಿಯಾಜ್ ಅಹಮದ್ ತಿಳಿಸಿದ್ದಾರೆ.
೩-೪ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಸೇವೆ ಸಲ್ಲಿಸಿರುವ ಬಹುತೇಕ ಮಂದಿ ಈ ಬಾರಿ ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಚಿತ್ರ ಎಂದರೆ ೧೫ ಅಭ್ಯರ್ಥಿಗಳಲ್ಲಿ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಕೆಲವರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡದೆ ತಟಸ್ಥವಾಗಿ ಉಳಿದುಕೊಂಡಿದ್ದಾರೆ. ಶಿಕ್ಷಕರ ಚುನಾವಣೆಯಲ್ಲೂ ಜಾತಿ ಹಾಗು ರಾಜಕಾರಣ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
