ಜಾನಪದ ಕಲಾವಿದ ಜಿ. ದಿವಾಕರ್‌ಗೆ `ಕರ್ನಾಟಕ ಕಲಾವಿಭೂಷಣ' ರಾಜ್ಯ ಪ್ರಶಸ್ತಿ
ಜಿ. ದಿವಾಕರ್
ಭದ್ರಾವತಿ: ಬೆಂಗಳೂರಿನ ಮತ್ತಿಕೆರೆ ಕರ್ನಾಟಕ ನೇತಾಜಿ ಚಾರಿಟೆಬಲ್ ಟ್ರಸ್ಟ್ ನಗರದ ಜಾನಪದ ಹಾಗು ರಂಗಭೂಮಿ ಕಲಾವಿದ ಜಿ. ದಿವಾಕರ ಅವರಿಗೆ `ಕರ್ನಾಟಕ ಕಲಾವಿಭೂಷಣ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ದಿವಾಕರ ಅವರು ಜಾನಪದ ಹಾಗು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಮೇ.೭ರಂದು ಸಂಜೆ ೪ ಗಂಟೆಗೆ ಬೆಂಗಳೂರು, ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ನಾಡಿನ ವಿವಿಧ ಮಠ-ಮಂದಿರಗಳ ಸ್ವಾಮೀಜಿಗಳು, ಸಾಹಿತಿಗಳು ಹಾಗು ವಿವಿಧ ಕ್ಷೇತ್ರದ ಗಣ್ಯರು, ಟ್ರಸ್ಟ್ ಗೌರವಾಧ್ಯಕ್ಷ ಎಂ. ಪುಟ್ಟೇಗೌಡ, ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು.
ದಿವಾಕರ ಅವರಿಗೆ ಈಗಾಗಲೇ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಾಗು ತಾಲೂಕು ಮಟ್ಟದ ಹಲವು ಪ್ರಶಸ್ತಿಗಳು ಸಂದಿವೆ. ಜಾನಪದ ಹಾಗು ರಂಗಭೂಮಿ ಕಲಾವಿದರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳು, ಇವರನ್ನು ಅಭಿನಂದಿಸಿವೆ.
