ಏ.೩ರಂದು ನಿವೃತ್ತಿ ಹೊಂದಿದ ಸೈನಿಕನಿಗೆ ಅಭಿನಂದನಾ ಸಮಾರಂಭ



    ಭದ್ರಾವತಿ : ಭಾರತೀಯ ಸೇನೆಯಲ್ಲಿ ಸುಧೀರ್ಘ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ತಾಲೂಕಿನ ಬಿಸಿಲುಮನೆ ಗ್ರಾಮದ ಟಿ.ಪಿ ವಿಶ್ವನಾಥ್ ಅವರಿಗೆ ಏ.೩ರ ಶುಕ್ರವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಗ್ರಾಮಸ್ಥರು ಹಾಗು ಅಭಿಮಾನಿಗಳು ವಿಶ್ವನಾಥ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆಗಳು ನಡೆಸಿದ್ದು, ಮಧ್ಯಾಹ್ನ ೨ ಗಂಟೆಗೆ ಗಂಗೂರಿನ ಸರ್ಕಾರಿ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಿಸಿಲುಮನೆ ಗ್ರಾಮದ ಶ್ರೀನಿವಾಸರಾವ್ ಕೋರಿದ್ದಾರೆ