ಪಿಟಿಇಎಸ್ ಶಾಲೆಗೆ ಶೇ.೧೦೦ ಫಲಿತಾಂಶ
ಭದ್ರಾವತಿ : ಕಾಗದನಗರದ ಪೇಪರ್ ಟೌನ್ ಆಂಗ್ಲ ಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ ೪೫ ವಿದ್ಯಾರ್ಥಿಗಳ ಪೈಕಿ ೧೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೧೪ ವಿದ್ಯಾರ್ಥಿ ಪ್ರಥಮ ಶ್ರೇಣಿ ಹಾಗು ೨೧ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಸ್.ವಿ ಪ್ರತೀಕ್ ೬೦೪ ಅಂಕಗಳೊಂದಿಗೆ ಶಾಲೆಗೆ ಪ್ರಥಮ, ಆರ್. ರಾಚೇಲ್ ೫೮೫ ಅಂಕಗಳೊಂದಿಗೆ ದ್ವಿತೀಯಾ ಹಾಗು ವಿ. ತನುಶ್ರೀ ೫೮೪ ಅಂಕಗಳೊಂದಿಗೆ ತೃತೀಯಾ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತಮ ಫಲಿತಾಂಶದೊಂದಿಗೆ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.
