ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ಪುತ್ರ ಗಣೇಶ್‌ರನ್ನು ಪರಿಚಯಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ 



ಚಿಕ್ಕಮಗಳೂರು ಎನ್ ಆರ್ ಪುರದಲ್ಲಿ ಭದ್ರನದಿ ಸೇತುವೆ ಉದ್ಘಾಟನೆಗಾಗಿ ಭಾನುವಾರ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜೊತೆಗೆ ತಮ್ಮ ಪುತ್ರ ಬಿ.ಎಸ್ ಗಣೇಶ್‌ರನ್ನು ಪರಿಚಯಿಸಿದರು. 
    ಭದ್ರಾವತಿ: ಚಿಕ್ಕಮಗಳೂರು ಎನ್ ಆರ್ ಪುರದಲ್ಲಿ ಭದ್ರನದಿ ಸೇತುವೆ ಉದ್ಘಾಟನೆಗಾಗಿ ಭಾನುವಾರ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜೊತೆಗೆ ತಮ್ಮ ಪುತ್ರ ಬಿ.ಎಸ್ ಗಣೇಶ್‌ರನ್ನು ಪರಿಚಯಿಸಿದರು. 
    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಗಣೇಶ್‌ರವರಿಗೆ ತಮ್ಮ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿರುವ ಸಂಗಮೇಶ್ವರ್‌ರವರು ಈಗಾಗಲೇ ಗಣೇಶ್‌ರನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಥಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರನ್ನಾಗಿಸಿದ್ದು, ಕ್ಷೇತ್ರದಾದ್ಯಂತ ಬಹಿರಂಗ ಸಭೆಗಳನ್ನು ನಡೆಸಿ ಗಣೇಶ್‌ರನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. 
    ಈ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಪಕ್ಷದ ಸಚಿವರು, ಸಂಸದರು, ಮುಖಂಡರುಗಳಿಗೆ ಗಣೇಶ್‌ರನ್ನು ವಿಶೇಷವಾಗಿ ಪರಿಚಯಿಸುತ್ತಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಲವಾರು ಬಾರಿ ಗಣೇಶ್‌ರನ್ನು ಪರಿಚಯಿಸಿದ್ದು, ಮುಂಬರುವ ಚುನಾವಣೆಯಲ್ಲಿ ಗಣೇಶ್‌ರವರಿಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.