ಅಕ್ರಮ ಮದ್ಯ ಮಾರಾಟ : ಒಂದೇ ದಿನ ಎರಡು ಕಡೆ ದಾಳಿ


    ಭದ್ರಾವತಿ : ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ಒಂದೇ ದಿನ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಕಡೆ ದಾಳಿ ನಡೆಸಿರುವ ಘಟನೆ ನಡೆದಿದೆ. 
    ಪ್ರೋಬೇಷನರಿ ಐಪಿಎಸ್ ಅಧಿಕಾರಿ ಮೇಘ ಅಗರ್ವಾಲ್‌ರವರು ಏ.೨೧ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ರಾತ್ರಿ ೭.೧೫ರ ಸಮಯದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ಒಟ್ಟು ೩೧ ಲೀಟರ್, ೫೦ ಮಿಲಿ ಲೀಟರ್ ಸುಮಾರು ೧೬,೦೫೫ ರು. ಮೌಲ್ಯದ ೪೧ ವಿವಿಧ ಬಗೆಯ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 
    ಗ್ರಾಮದ ಮತ್ತೊಂದು ಕಡೆ ರಾತ್ರಿ ೯ ಗಂಟೆ ಸಮಯದಲ್ಲಿ ದಾಳಿ ನಡೆಸಿ ೧೯ ಲೀಟರ್ ೧೦೦ ಮಿಲಿ ಲೀಟರ್ ಸುಮಾರು ೪,೫೦೦ ರು. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.