ಮೇ.10ರಂದು ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್‌ರವರ ಜನ್ಮದಿನೋತ್ಸವ

ಬಾಪೂಜಿ ಹರಿಜನ (ಮಾದರ) ಸೇವಾ ಸಂಘದಿಂದ ಆಯೋಜನೆ, ವಿವಿಧ ಯೋಜನೆಗಳಿಗೆ ಚಾಲನೆ


ಭದ್ರಾವತಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಪೂಜಿ ಹರಿಜನ (ಮಾದರ) ಸೇವಾ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮಾಹತಿ ನೀಡಿದರು.
ಭದ್ರಾವತಿ : ಬಾಪೂಜಿ ಹರಿಜನ (ಮಾದರ) ಸೇವಾ ಸಂಘದಿಂದ ಮೇ.10ರ ಭಾನುವಾರ ಬೆಳಗ್ಗೆ 10.30ಕ್ಕೆ ಹುತ್ತಾಕಾಲೋನಿಯ ಚಂದ್ರಾಲಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮದಿನೋತ್ಸವ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ತಿಳಿಸಿದರು.
    ಅವರು ಗುರುವಾರ ಪತ್ರಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಸದಸ್ಯರಾದ ಬಿ.ಕೆ. ಮೋಹನ್, ಲತಾ ಚಂದ್ರಶೇಖರ್, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನ್ಯಾಯವಾದಿಗಳಾದ ಎಂ. ಶಿವಕುಮಾರ್, ನಾರಾಯಣಸ್ವಾಮಿ, ಶಿಕ್ಷಕ ಬಿ.ಎಚ್ ಪ್ರಸಾದ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
     ಮುಖ್ಯ ಭಾಷಣಕಾರರಾಗಿ ಸರ್ಕಾರಿ ಪ್ರಥಮ ಕಾಲೇಜು, ತರೀಕೆರೆ. ಪ್ರಾಂಶುಪಾಲ ಡಾ.ಟಿ ಮಂಜುನಾಥ್ ಮತ್ತು ಆಕಾಶವಾಣಿ, ಭದ್ರಾವತಿ ಹಿರಿಯ ಉದ್ಘೋಷಕ ಎಂ.ಕೆ ಶಿವಕುಮಾರ್ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು.
     ಸಂಘವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾಗುತ್ತಿದ್ದು, ಸಮಾಜದವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಸಂಘದಲ್ಲಿ ಸದಸ್ಯರಾದ ಪೋಷಕರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪಾರಿತೋಷಕದೊಂದಿಗೆ ಸನ್ಮಾನಿಸಲಾಗುವುದು.
     ಸಂಘದ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರು ಸೂಚಿಸಿರುವ (ನಾಮ ನಿದೇರ್ಶನ) ಕುಟುಂಬದ ಸದಸ್ಯರಿಗೆ 5000 ರು. ಮರಣೋತ್ತರವಾಗಿ ಆರ್ಥಿಕ ನೆರವು ನೀಡಲಾಗುವುದು. ಸದಸ್ಯರ ಅಪಘಾತ ಹೊರತುಪಡಿಸಿ ಆರೋಗ್ಯದಲ್ಲಿ ತೀವ್ರ ತೊಂದರೆಗೆ (ನಿರ್ದಿಷ್ಟ ಕಾಯಿಲೆಗಳು ಕ್ಯಾನ್ಸರ್, ಕಿಡ್ನಿ ತೊಂದರೆಯಿಂದ ಡಯಾಲಿಸಿಸ್, ಹೃದಯರೋಗದ ಶಸ್ತç ಚಿಕಿತ್ಸೆ, ಈ ಕಾಯಿಲೆಗಳ ಬಗ್ಗೆ) ಒಳಗಾದಲ್ಲಿ ವೈದ್ಯರ ವರದಿ ಪರಿಶೀಲಿಸಿ, ಸದಸ್ಯರ ಕುಟುಂಬದ ಜೀವನಾಧಾರಗಳನ್ನು ಪರಿಶೀಲಿಸಿ 5000 ರು. ಸಂಘದ ಮೂಲಕ ಸಹಾಯ ಧನವಾಗಿ ಉಚಿತವಾಗಿ ಒಂದು ಬಾರಿ ಮಾತ್ರ ನೀಡಲಾಗುವುದು ಎಂದರು.
     ಸಂಘದ ಮಹಿಳಾ ಸದಸ್ಯರಿಗೆ ಹೊಲಿಗೆ ತರಬೇತಿ ಕೇಂದ್ರ ತೆರೆದು ತರಬೇತಿ ನೀಡಿ ಸರ್ಕಾರದಿಂದ ಹೊಲಿಗೆ ಯಂತ್ರಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು. ಸಂಘದವತಿಯಿAದ ಸಮಾಜದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋಚಿಂಗ್ ತರಬೇತಿ ನೀಡಲು ಪ್ರಯತ್ನಿಸಲಾಗುವುದು.
    ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಂಘದ ಸದಸ್ಯರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಪತ್ತಿನ ಸಹಕಾರ ಸಂಘವನ್ನು (ಸೊಸೈಟಿ) ತೆರೆಯಲು ಪ್ರಯತ್ನಿಸಲಾಗುವುದು. ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣದ ಕುರಿತು ಕಾರ್ಯಗಾರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದೇ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮರಣೋತ್ತರ ನಿಧಿ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದರು.
    ಸಂಘದ ಗೌರವಾಧ್ಯಕ್ಷ ಮಾರುತಿ, ಉಪಾಧ್ಯಕ್ಷ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಮಹಿಳಾ ಸಂಘಟಕಿ ಶೋಭಾ, ಎ.ಕೆ ನರಸಿಂಹಪ್ಪ, ರಾಜು ನರಸಯ್ಯ, ಹನುಮಂತ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.