ಮೇ.೩ರಂದು ಛಲವಾದಿ ಸಮಾಜದ ವಾರ್ಷಿಕೋತ್ಸವ, ಅಂಬೇಡ್ಕರ್ ಜಯಂತಿ
ಛಲವಾದಿ ಸಮಾಜದವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು
ಭದ್ರಾವತಿ ನಗರದ ನ್ಯೂಟೌನ್ ವಿಐಎಸ್‌ಎಲ್ ನಗರಾಡಳಿತ ಕಛೇರಿ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಿಂದ ಮೇ.೩ರ ಭಾನುವಾರ ಸಂವಿಧಾನ ಶಿಲ್ಪಿ, ವಿಶ್ವಮಾನವ, ಭಾರತರತ್ನ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಾಗು ಸಮಾಜದ ವಾರ್ಷಿಕೋತ್ಸವ ಆಯೋಜಿಸಲಾಗಿದೆ. ಈ ಸಂಬಂಧ ಶನಿವಾರ ಸಮಾಜದ ಸದಸ್ಯರು ಹಾಗು ಅವರ ಕುಟುಂಬ ವರ್ಗದವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.
ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ನಗರಾಡಳಿತ ಕಛೇರಿ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಿಂದ ಮೇ.೩ರ ಭಾನುವಾರ ಸಂವಿಧಾನ ಶಿಲ್ಪಿ, ವಿಶ್ವಮಾನವ, ಭಾರತರತ್ನ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಾಗು ಸಮಾಜದ ವಾರ್ಷಿಕೋತ್ಸವ ಆಯೋಜಿಸಲಾಗಿದೆ. ಈ ಸಂಬಂಧ ಶನಿವಾರ ಸಮಾಜದ ಸದಸ್ಯರು ಹಾಗು ಅವರ ಕುಟುಂಬ ವರ್ಗದವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.
ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ನಿಂಬೆಹಣ್ಣು ಮತ್ತು ಚಮಚ ಅಥವಾ ಥ್ರೋ ದ ಬಾಲ್, ಕಪ್ಪೆ ಓಟ ಹಾಗು ೩೦ ಮೀ. ಓಟದ ಸ್ಪರ್ಧೆ ಮತ್ತು ಮೊದಲ ಮತ್ತು ೨ನೇ ಹಂತದಲ್ಲಿ ೪೦ ಮೀ. ಓಟ, ಬುಕ್ ಬ್ಯಾಲೆನ್ಸ್ ಮತ್ತು ಕಪ್ಪೆ ಓಟ, ೩, ೪ ಮತ್ತು ೫ನೇ ಹಂತದಲ್ಲಿ ಒಂಟಿ ಕಾಲಿನ ಜಿಗಿತ, ೫೦ ಮೀ. ಓಟ, ಬಾಲ್ ಇನ್ ದಿ ಬ್ಯಾಸ್ಕೆಟ್ ಹಾಗು ೬ ರಿಂದ ೧೦ನೇ ಹಂತದಲ್ಲಿ ಲಗೋರಿ, ೮೦ ಮೀ. ಓಟ ಹಾಗು ಗುಂಡು ಎಸೆತ ಮತ್ತು ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ೧೦೦ ಮೀ. ಓಟ, ಗುಂಡು ಎಸೆತ ಮತ್ತು ಒಂಟಿ ಕಾಲಿನ ಜಿಗಿತ ಸ್ಪರ್ಧೆಗಳು ಜರುಗಿದವು.
೧೮ ವರ್ಷ ಮೇಲ್ಪಟ್ಟ ಹಾಗು ೪೦ ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರಿಗೆ ಬಾಂಬಿಂಗ್ ದಿ ಸಿಟಿ, ಲಗೋರಿ, ಮ್ಯೂಸಿಕಲ್ ಚೇರ್ ಹಾಗು ೪೦ ವರ್ಷ ಹಾಗು ಮೇಲ್ಪಟ್ಟವರಿಗೆ ಲಗೋರಿ, ಬುಕ್ ಬ್ಯಾಲೆನ್ಸ್ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಜರುಗಿದವು. ಸಮಾಜದ ಅಧ್ಯಕ್ಷ ಚನ್ನಪ್ಪ ಹಾಗು ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.
ಅಂಬೇಡ್ಕರ್ ಜಯಂತಿ-ವಾರ್ಷಿಕೋತ್ಸವ :
ಮೇ.೩ರ ಭಾನುವಾರ ಸಂಜೆ ೫ ಗಂಟೆಗೆ ಆಯೋಜಿಸಲಾಗಿರುವ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಾಗು ಸಮಾಜದ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ನಂತರ ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಯವರು ಪ್ರವಚನ ನೀಡಲಿದ್ದಾರೆ. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಪ್ರತಿಭಾ ಪುರಸ್ಕಾರ ನೀಡಲಿದ್ದು, ಕೆಪಿಸಿಸಿ ಪದವಿಧರರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ನಗರದ ಹೊಸನಂಜಾಪುರ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಬಹುಮಾನ ವಿತರಣೆ ಮಾಡಲಿದ್ದಾರೆ.
ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆವಹಿಸಲಿದ್ದು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಛಲವಾದಿಗಳ ಸಮಾಜದ ಜಿಲ್ಲಾಧ್ಯಕ್ಷ ಕುಮಾರ್ ಸ್ವಾಮಿ, ಸಮಾಜದ ಹಿರಿಯ ಮುಖಂಡ ಬಿ.ಡಿ ಸಾವಕ್ಕನವರ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮ ಬದರಿನಾರಾಯಣ, ಮಾಜಿ ಅಧ್ಯಕ್ಷೆ ಸರ್ವಮಂಗಳ ಭೈರಪ್ಪ, ನಗರಸಭೆ ಸದಸ್ಯೆ ಉದಯ ಕುಮಾರ್, ಸಮಾಜದ ಮಾಜಿ ಅಧ್ಯಕ್ಷರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

.jpeg)