ಶಾಸಕ ಸಂಗಮೇಶ್ವರ್ ಗೆ ಅಭಿಮಾನಿಯಿಂದ ಬುದ್ಧ ಪೂರ್ಣಿಮೆಯಂದು ಕಾಣಿಕೆ ಭದ್ರಾವತಿ: ಬುದ್ಧ ಪೂರ್ಣಿಮೆಯಂದು
ಭದ್ರಾವತಿಯಲ್ಲಿ ಬುದ್ಧ ಪೂರ್ಣಿಮೆಯಂದು ಅಭಿಮಾನಿಯೊಬ್ಬರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಭಗವಾನ್ ಬುದ್ಧ ಅವರೊಂದಿಗೆ ಅಂಬೇಡ್ಕರ್ ಮತ್ತು ಬಸವಣ್ಣನವರ ಭಾವಚಿತ್ರವಿರುವ ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.
ಭದ್ರಾವತಿ: ಅಭಿಮಾನಿಯೊಬ್ಬರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಭಗವಾನ್ ಬುದ್ಧ ಅವರೊಂದಿಗೆ ಅಂಬೇಡ್ಕರ್ ಮತ್ತು ಬಸವಣ್ಣನವರ ಭಾವಚಿತ್ರವಿರುವ ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.
ಜಗತ್ತಿಗೆ ಸತ್ಯ, ಅಹಿಂಸೆ, ಶಾಂತಿ, ಸೌಹಾರ್ದತೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಆದರ್ಶಗಳು ಪ್ರತಿ ದಿನ ನಮ್ಮದಾಗಬೇಕೆಂಬ ಆಶಯ ಸಂಗಮೇಶ್ವರ್ ಅಭಿಮಾನಿ, ಯುವ ಮುಖಂಡ ವೈ. ನಟರಾಜ್ ಹೊಂದಿದ್ದಾರೆ.
ವೈ. ನಟರಾಜ್ ಶಾಸಕರ ಗೃಹ ಕಚೇರಿಗೆ ತೆರಳಿ ಸನ್ಮಾನಿಸುವ ಮೂಲಕ ಕಾಣಿಕೆ ನೀಡಿ ಬುದ್ದ ಪೂರ್ಣೀಮೆ ಶುಭ ಕೋರಿದ್ದಾರೆ.
