ನಗರಸಭೆ ಮಾಜಿ ಸದಸ್ಯ ಕೆ.ಬಿ ಗಂಗಾಧರ ನಿಧನ
ಕೆ.ಬಿ ಗಂಗಾಧರ
ಭದ್ರಾವತಿ : ತಾಲೂಕಿನ ಮಂಡಲ ಪಂಚಾಯಿತಿ ಹಾಗು ನಗರಸಭೆ ಮಾಜಿ ಸದಸ್ಯ, ಭಂಡಾರಹಳ್ಳಿ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ ಗಂಗಾಧರ(೭೫) ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದರು.
ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದಾರೆ. ಗಂಗಾಧರ್‌ರವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಲೋಯರ್ ಹುತ್ತಾ ಕವಲಗುಂದಿ ದೊಣಬಘಟ್ಟ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
ಪ್ರಸ್ತುತ ಗಂಗಾಧರ್‌ರವರ ಸೊಸೆ ಶೃತಿ ವಸಂತಕುಮಾರ್ ನಗರಸಭೆ ಸದಸ್ಯೆಯಾಗಿದ್ದು, ಗಂಗಾಧರ್‌ರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
